ಶುಕ್ರವಾರ, ಜನವರಿ 10, 2025
ಮಾಣಿಕರೆಡ್ಡಿ ಕೌಡಾಳೆ.
ಇಂಗ್ಲೀಷ್ ಭಾಷೆಯಲ್ಲಿ ಸಾಹಿತ್ಯ ರಚಿಸುತ್ತಿರುವ ಮಾಣಿಕರೆಡ್ಡಿ ಕೌಡಾಳೆಯವರು. ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಇಸ್ಲಾಂಪೂರ ಗ್ರಾಮದ ತಿಪ್ಪಾರೆಡ್ಡಿ ಮತ್ತು ರಂಗಮ್ಮಾ ದಂಪತಿಗಳಿಗೆ ದಿನಾಂಕ ೧೨-೧೨-೧೯೬೨ರಲ್ಲಿ ಜನಿಸಿದ್ದಾರೆ. ಎಂ.ಎA.ಇAಗ್ಲೀಷ್ ಸ್ನಾತಕೊತ್ತರ ಪದವಿಧರರಾದ ಇವರು ಕೆ.ಎ.ಎಸ್ ಪರೀಕ್ಷೆಯು ಪಾಸು ಮಾಡಿ ಇಂಗ್ಲೀಷ್‌ನಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದಾರೆ. ಮತ್ತು ಇಂಗ್ಲೀಷ್ ಭಾಷೆಯಲ್ಲಿ `ಒಡಿಸಿ ಪವರೆಡ್ ಬಾಯ್ ಪಾಜಿಟಿವ್ ವಿಬ್ರೆಶನ್ಸ ' ಎಂಬ ಕಾದಂಬರಿ ಬರೆದಿದ್ದು ಅದು 'ಇಂಡಿಯನ್ ಎಕ್ಸಪ್ರೆಸ್'ಎಂಬ ಆಂಗ್ಲ ಭಾಷೆ ಪತ್ರಿಕೆಯಲ್ಲಿ ವಿಮರ್ಶೆಯು ಪ್ರಕಟವಾಗಿದೆ. ಇವರು ಕೆಲವರ್ಷ ಮಧ್ಯ ಪ್ರದೇಶ ಸರ್ಕಾರದಲ್ಲಿ ಉನ್ನತ ಹುದ್ದೆ ಪಡೆದು, ಸೇವೆ ಸಲ್ಲಿಸಿ ನಂತರ ಆ ಹುದ್ದೆ ತೊರೆದು ಬೆಂಗಳೂರಿನ ಎನ್.ಡಿ.ಡಿ.ಬಿ.ಮೈಯ್ಕೊ ಸಿಡ್ಸ,,ಜೆಕೆ, ಗ್ರೂಪ್ಸ ಸುಕುಮಾ ಎಂಬ ಕೆಲವು ಖಾಸಗಿ ಕಂಪನಿಗಳಲ್ಲಿ ಉನ್ನತ ಹುದ್ದೆಗಳು ನಿರ್ವಹಿಸಿ ೫೦ಕ್ಕೂ ಹೆಚ್ಚು ದೇಶಗಳನ್ನು ಕಂಪನಿ ಕೆಲಸದ ನಿಮಿತ್ತ ಸುತ್ತಾಡಿದ್ದಾರೆ. ಮತ್ತು ವೀದೆಶಾಂಗ ವ್ಯವಹಾರದಲ್ಲಿ `ಕನ್ಸಲಂಟ್' ಕೆಲಸ ಮಾಡಿದ್ದಾರೆ. ಹಾಗೂ ಹಲವಾರು ಕಾಲೇಜಿನ ವಿಶ್ವವಿದ್ಯಾಲಯದ ಇಂಜಿನಿಯರಿAಗ್ ಪದವಿ ವಿದ್ಯಾರ್ಥಿಗಳಿಗೆ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಸದ್ಯ ಇವರು ಬೆಂಗಳೂರಿನಲ್ಲಿ `ಎಕ್ಸಫರ್ಟ ಇಂಪರ್ಟ ಕನ್ಸಲ್ಟ' ಎಂಬ ಸ್ವಯಂ ಉದ್ಯೋಗ ಮಾಡುತ್ತಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ