ಪುಟಗಳು

ಶುಕ್ರವಾರ, ಜನವರಿ 10, 2025

ಮಲ್ಲಿಕಾರ್ಜುನ ಎಂ.ಪಂಚಾಳ

ಸುಮಾರು ೧೯೮೨ ರಿಂದ ಸಾಹಿತ್ಯ ಕ್ಷೇತ್ರದಲ್ಲಿ ತೋಡಗಿಸಿಕೊಂಡು ಬಹಳ ವರ್ಷಗಳ ನಂತರ ಪುಸ್ತಕ ಪ್ರಕಟಿಸಿದ ಲೇಖಕರೆಂದರೆ ಮಲ್ಲಿಕಾರ್ಜುನ ಎಂ.ಪAಚಾಳ. ಇವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಧನ್ನೂರಾ (ಆರ್) ಗ್ರಾಮದ ಮೋನಪ್ಪಾ ಮತ್ತು ಈರಮ್ಮಾ ದಂಪತಿಗಳಿಗೆ ದಿನಾಂಕ ೧-೭-೧೯೬೧ರಲ್ಲಿ ಜನಿಸಿದ್ದಾರೆ. ಎಂ.ಎ.ಬಿ.ಎಡ್.ಸ್ನಾತಕೋತ್ತರ ಪದವಿ ಪಡೆದು ೧೯೯೪ರಲ್ಲಿ ಹುಮನಾಬಾದ ತಾಲೂಕಿನ ಕೊಡಂಬಲ್‌ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆಗೆ ಸೇರಿ ಹಲವು ವರ್ಷಗಳ ನಂತರ ಬಡ್ತಿ ಹೊಂದಿ ಅದೇ ಶಾಲೆಯಲ್ಲಿ ಮುಖ್ಯಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿದ್ಯಾರ್ಥಿ ಜೀವನದಲ್ಲಿಯೆ ಸಾಹಿತ್ಯ ರಚನೆಯ ಗೀಳು ಬೆಳೆಸಿಕೊಂಡ ಇವರು `ಕವನ ಕುಸುಮ' ಎಂಬ ಕವನ ಸಂಕಲನ ಪ್ರಕಟಿಸಿದ್ದಾರೆ. ಮತ್ತು `ನನ್ನ ತಂಗಿ' ಎಂಬ ಕಾದಂಬರಿ, `ಅಮೃತ ಸ್ವಾದ' ಎಂಬ ಚೌಪದಿ ಪದ್ಯಗಳು, ನೂರಾರು ತ್ರಿಪದಿಗಳು, ಕತೆ, ಕವನ, ಭಾಷಣ, ಲೇಖನಗಳನ್ನು ಬರೆದಿದ್ದು ಅವು ಅಪ್ರಕಟಿತವಾಗಿವೆ. ಇವರಿಗೆ ೨೦೧೧ರಲ್ಲಿ ಬೀದರ ಜಿಲ್ಲಾ ಮಟ್ಟದ `ಉತ್ತಮ ಶಿಕ್ಷಕ ಪ್ರಶಸ್ತಿ’ ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಲಭೀಸಿವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ