ಪುಟಗಳು

ಶುಕ್ರವಾರ, ಜನವರಿ 10, 2025

ಡಾ.ಮಯಾದೇವಿ ಜಿ. ಮಾಲಿ ಪಾಟೀಲ್.

ಸಾಹಿತಿ ಹಾಗೂ ಕವಯತ್ರಿಯಾದ ಡಾ.ಮಹಾದೇವಿ ಜಿ.ಮಾಲಿಪಾಟೀಲ್. ಇವರು ಬಸವಕಲ್ಯಾಣ ತಾಲೂಕಿನ ಸಿರಗಾಪೂರದ ಜಿ.ಎಸ್.ಮಾಲಿಪಾಟೀಲ್ ರವರ ಧರ್ಮ ಪತ್ನಿಯಾಗಿದ್ದು, ಕಮಲಾಪೂರ ತಾಲೂಕಿನ ಮಹಾಗಾಂವದ ಶ್ರೀಮಂತರಾವ ಮತ್ತು ಗುಂಡಮ್ಮ ದಂಪತಿಗಳಿಗೆ ದಿನಾಂಕ ೪-೫-೧೯೫೯ರಲ್ಲಿ ಜನಿಸಿದ್ದಾರೆ. ಎಂ.ಎ. ಪಿ.ಎಚ್.ಡಿ. ಪದವೀಧರರಾದ ಇವರು ಕಲಬುರಗಿಯ ಶ್ರೀನಿವಾಸ ಸರಡಗಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. `ಅಂಬಲಗಿ ಚನ್ನಮಲ್ಲ ಕವಿ, ಜೀವನ ಕೃತಿಗಳ ಒಂದು ಅಧ್ಯಯನ' ಎಂಬುದು ಅವರ ಪಿ.ಎಚ್.ಡಿ.ಮಹಾ ಪ್ರಬಂಧವಾಗಿದೆ. ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯ ರಚನೆಯ ಗೀಳು ಬೆಳೆಸಿಕೊಂಡ ಇವರು ೧೯೯೯ರಲ್ಲಿ `ಸಾರ್ಥಕ ಬದುಕು, ೨೦೦೦ರಲ್ಲಿ `ಸೋಲರಿಯದ ಸರದಾರ ರಾಮಚಂದ್ರ ವೀರಪ್ಪ, ಶರಣಯ್ಯಾ ಸ್ವಾಮಿ ಮಹಾಗಾಂವ, ೨೦೧೨ರಲ್ಲಿ `ಅಂಬಲಗಿಯ ಚನ್ನಮಲ್ಲ ವಿರಚಿತ ಶಿಬಿರಾಯನ ಸುತ್ತಿ, ೧೯೯೭ರಲ್ಲಿ `ಆಳಂದ ತಾಲೂಕಿನ ಕವಿಗಳು, ೨೦೦೦ರಲ್ಲಿ `ಆಳಂದ ತಾಲೂಕಿನ ದರ್ಶನ, ೨೦೦೨ರಲ್ಲಿ `ಆಳಂದ ತಾಲೂಕಿನ ಸ್ವತಂತ್ರ ಹೋರಾಟಗಾರರು, ವಿಮೋಚನಾ ಹೋರಾಟಕ್ಕೆ ಮಹಿಳೆಯರ ಕೊಡುಗೆ, ಹಾಗೂ ೨೦೦೩ರಲ್ಲಿ `ಹೈದರಾಬಾದ ಕರ್ನಾಟಕ ವಿಭಾಗ ಶಿಕ್ಷಣದಲ್ಲಿ ಹಿಂದುಳಿಯಲು ಕಾರಣ, ಷಡ್ವರ್ಗಗಳು ಅರಿಗಳೇ ? ಮಿತ್ರರೇ ? ೨೦೦೮ರಲ್ಲಿ `ಆದರ್ಶ ದಂಪತಿ, ೨೦೧೨ರಲ್ಲಿ `ವೀರಶೈವ ಧರ್ಮಾಚರಣೆಗಳು, `ಗುರುಗಳನ್ನು ನಾನು ಕಂಡAತೆ, ಸಿಂಗಾಪುರದ ತತ್ವಪದಕಾರ ನಾಗೇಂದ್ರ ಬಿರಾದಾರ. ಇತ್ಯಾದಿ ಕೃತಿಗಳು ಪ್ರಕಟಿಸಿದ್ದಾರೆ. ಇವರ ಕವನ, ಲೇಖನ, ಪ್ರಬಂಧ, ಚರ್ಚೆ, ಉಪನ್ಯಾಸಗಳು ಕನ್ನಡದ ವಿವಿಧ ಪತ್ರಿಕೆ ಹಾಗೂ ಆಕಾಶವಾಣಿಯಲ್ಲಿ ಪ್ರಕಟ, ಪ್ರಸಾರವಾಗಿವೆ. ಇವರು ಕೆಲವರ್ಷ ಆಳಂದ ತಾಲೂಕಿನ ಕಸಾಪ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವರ ಸಾಹಿತ್ಯ ಹಾಗೂ ಶೈಕ್ಷಣಿಕ ಸಾಧನೆಗೆ ೨೦೦೩ರಲ್ಲಿ ಕಲಬುರಗಿಯಿಂದ `ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ, ೨೦೧೮ರಲ್ಲಿ ಕಲಬುರಗಿಯ ಕಸಾಪದ ವತಿಯಿಂದ `ಉತ್ತಮ ಶಿಕ್ಷಕ ಪ್ರಶಸ್ತಿ, ಹಾರಕೂಡ ಹಿರೇಮಠ ಸಂಸ್ಥಾನದ ವತಿಯಿಂದ `ಶ್ರೀ ಚೆನ್ನರತ್ನ’ ಪ್ರಶಸ್ತಿಯು ನೀಡಿ ಗೌರವಿಸಲಾಗಿದೆ. ಬಿಜಾಪುರದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಮುಖ ವೇದಿಕೆಯ ಕವಿಗೋಷ್ಠಿಯಲ್ಲಿ `ಹಳದಿಯ ಹಾಲು’ ಕಾವ್ಯ ವಾಚನವು ಮಾಡಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ