ಪುಟಗಳು

ಶನಿವಾರ, ಜನವರಿ 11, 2025

ಮಚ್ಚೇಂದ್ರನಾಥ ಸೋನಕಾಂಬಳೆ

ಕನ್ನಡ ಮತ್ತು ಮರಾಠಿ ಭಾಷೆಗಳೆರಡರಲ್ಲೂ ಸಾಹಿತ್ಯ ರಚಿಸಿದ ಕವಿಯೆಂದರೆ ದಿ.ಮಚ್ಚೇಂದ್ರನಾಥ ಸೋನಕಾಂಬಳೆಯವರು. ಇವರು ಬೀದರ ಜಿಲ್ಲೆ ಔರಾದ ತಾಲೂಕಿನ ಎಂ.ಡೋಣಗಾAವ ಗ್ರಾಮದ ವಿಶ್ವನಾಥ ಮತ್ತು ಮಾಪವ್ವ ದಂಪತಿಗಳಿಗೆ ೧೯೪೫ರಲ್ಲಿ ಜನಿಸಿದ್ದಾರೆ. ಬಾಲ್ಯದಿಂದಲೇ ಅನೇಕ ಹಾಡುಗಳನ್ನು ಹಾಡಲು ಕರಗತ ಮಾಡಿಕೊಂಡು ಬುದ್ಧ ಮತ್ತು ಅಂಬೇಡ್ಕರ್ ಕುರಿತಾದ ಸಾಹಿತ್ಯ ರಚಿಸಿದ್ದಾರೆ. ೧೯೯೩ರಲ್ಲಿ ಇವರ ಮಗಳು ಸುಪ್ರೀತಾ ಸಾಕ್ಷರತಾ ಅಭಿಯಾನದಲ್ಲಿ ತೊಡಗಿಸಿಕೊಂಡಾಗ ಇವರ ಇಡಿ ಕುಟುಂಬವೆ ಸಾಕ್ಷರತೆಯ ಆಂದೋಲನಕ್ಕೆ ಯಶಸ್ವಿ ಕಾರಣಿಭೂತರಾದರು. ನಂತರ ದಲಿತ ಜನಜಾಗೃತಿಗಾಗಿ ಬುದ್ಧ ಮತ್ತು ಅಂಬೇಡ್ಕರ್ ತತ್ವ ಪ್ರಸಾರಕ್ಕಾಗಿ ಶ್ರಮಿಸಿದ್ದಾರೆ. ಮತ್ತು `ಜಯ ಭೀಮ ಗೀತ ಮಾಲಾ' ಎಂಬ ಕವನ ಸಂಕಲನವು ಪ್ರಕಟಿಸಿದ್ದಾರೆ. ಇವರ ಪತ್ನಿ ಬುದ್ದನ ತತ್ವಗಳಿಗೆ ಮಾರುಹೋಗಿ ಬೌದ್ಧ ಭಿಕ್ಷುಣಿಯಾಗಿ ಬೌದ್ಧ ಗಯಾಕ್ಕೆ ಹೋದಾಗ ಇತ್ತ ಮಚ್ಚೇಂದ್ರನಾಥರು ಅನಾರೋಗ್ಯಗ್ಯಕ್ಕೆ ತುತ್ತಾಗಿ ಕಾಯಿಲೆಯಿಂದ ನರಳುತ್ತ ದಿನಾಂಕ ೧೦-೯-೨೦೦೮ರಲ್ಲಿ ನಿಧನರಾಗಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ