ಶುಕ್ರವಾರ, ಜನವರಿ 10, 2025
ನಾರಾಯಣ ರಾಂಪುರೆ.
ಸಾಹಿತಿ ಹಾಗೂ ಕಲಾವಿದ ರಾಜಕೀಯ ದುರಿಣ, ಸಮಾಜ ಸೇವಕರಾಗಿ ಪುಸ್ತಕ ಪ್ರಕಟಿಸಿದ ಲೇಖಕರೆಂದರೆ ನಾರಾಯಣ ರಾಂಪೂರೆ. ಇವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ರಾಂಪೂರ ಗ್ರಾಮದ ಹೊನ್ನಪ್ಪಾ ಮತ್ತು ನಾಗಮ್ಮ ದಂಪತಿಗಳಿಗೆ ದಿನಾಂಕ ೯-೪-೧೯೬೫ ರಲ್ಲಿ ಜನಿಸಿದ್ದಾರೆ. ಬಿ.ಎ. ಎಲ್.ಎಲ್.ಬಿ ಪದವಿಧರರಾದ ಇವರು ೨೦೦೭ರಲ್ಲಿ `ಕೋರ್ಟ್ ಗೇಟ್’ ಎಂಬ ಕವನ ಸಂಕಲನ ಪ್ರಕಟಿಸಿದ್ದಾರೆ. `ಗುರು ಶಿಷ್ಯ’ ಎಂಬ ನಾಟಕದೊಂದಿಗೆ ಕೆಲ ಬೀದಿ ನಾಟಕಗಳು ಬರೆದಿದ್ದು ಅವು ಅಪ್ರಕಟಿತವಾಗಿವೆ. ಇವರ ಬರಹಗಳು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ೧೯೯೪ರಲ್ಲಿ ಗ್ರಾಂ.ಪA. ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಇವರು ೧೯೯೪, ಮತ್ತು ೨೦೦೪ರಲ್ಲಿ ಜಿ.ಪಂ.ಚುನಾವಣೆಗೆ ಸ್ಪರ್ಧಿಸಿದ್ದರು. ೨೦೦೮ರಿಂದ ಬಿ.ಜೆ.ಪಿ. ಜಿಲ್ಲಾ ಎಸ್.ಟಿ.ಮೋರ್ಚಾ ಅಧ್ಯಕ್ಷರಾಗಿ, ೨೦೧೧ರಿಂದ ೨೦೧೪ರವರೆಗೆ ರಾಜ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ೨೦೧೧ರಲ್ಲಿ ರಾಜೇಶ್ವರದಲ್ಲಿ ಭವಾನಿ ಗ್ರಾಮೀಣಭೀವೃದ್ದಿ ಸೊಸೈಟಿಯನ್ನು ಸ್ಥಾಪಿಸಿ ಭವಾನಿ ಹಿರಿಯ ಪ್ರಾಥಮಿಕ ಶಾಲೆಯನ್ನು ತೆರೆದು ಶಿಕ್ಷಣ ನೀಡುತ್ತಿದ್ದಾರೆ. ಲೂಜ್ ಮಾದಾ ಯೋಗೇಶರೊಂದಿಗೆ `ಮತ್ತೆ ಸತ್ಯಾಗ್ರಹ’ ಎಂಬ ಚಿತ್ರದಲ್ಲಿ ನಟಿಸಿ ೨೦೦೩ರಲ್ಲಿ ದೆಹಲಿಯಲ್ಲಿ ನಡೆದ ಐತಿಹಾಸಿಕ ಮಹಾನ್ ಪುರುಷರ `ಸಾಕ್ಷ್ಯ ಚಿತ್ರ’ ತ್ರಿಪ ಆ್ಯಂಡ್ ಸೌಂಡ ಕಾರ್ಯಕ್ರಮದಲ್ಲಿ ೯ ಜನರ ವೇಷಭೂಷಣದ ಪಾತ್ರ ಮಾಡಿ ಸೈ ಎನಿಸಿಕೊಂಡಿದ್ದಾರೆ. ೨೦೦೩ರಲ್ಲಿ ಬೀದರದಿಂದ ಉತ್ತಮ ಕಲಾವಿದ ಪ್ರಶಸ್ತಿಯು ಪಡೆದಿದ್ದಾರೆ. ೧೯೮೬ರಿಂದ ಹೋರಾಟದ ಬದುಕಿನೊಂದಿಗೆ ಸಾಹಿತ್ಯ ಕೃಷಿಯು ಮುಂದುವರೆಸಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ