ಪುಟಗಳು

ಶನಿವಾರ, ಜನವರಿ 11, 2025

ಸುನಿತಾ ಎಸ್. ಪಾಟೀಲ

ಕವಯತ್ರಿ ಸುನೀತಾ ಎಸ್.ಪಾಟೀಲ. ಇವರು ಬಸವಕಲ್ಯಾಣದ ಉಮಾಕಾಂತ ಹಾಗೂ ಮಹಾದೇವಿ ದಂಪತಿಗಳಿಗೆ ದಿನಾಂಕ ೧೫-೦೩-೧೯೮೧ರಲ್ಲಿ ಜನಿಸಿದ್ದಾರೆ. ಬಿ.ಎ. ಬಿ.ಪಿ.ಎಡ್ ಎಂ.ಎ. ಪದವಿಧರರಾದ ಇವರು ಹುಮನಾಬಾದ ತಾಲೂಕಿನ ಕಂದಗುಳ್ ಗ್ರಾಮದ ಶಂಭುಲಿAಗ ಪೋಲಿಸ್ ಪಾಟೀಲ್ ರವರ ಧರ್ಮ ಪತ್ನಿಯಾಗಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾಗಿ ಕಾಲೇಜು ದಿನಗಳಲ್ಲಿ ಸುನೀತಾ ಅಂಬಲಗೆ ಎಂಬ ಹೆಸರಿನಲ್ಲಿ ಕವನ ರಚನೆ ಮಾಡಿ ಸಾಹಿತಿಯಾಗಿ ಗುರುತಿಸಿಕೊಂಡವರು. ೨೦೦೮ರಲ್ಲಿ ಸರಕಾರಿ ಪ್ರೌಢ ಶಾಲೆಯ ದೈಹಿಕ ಶಿಕ್ಷಕರಾಗಿ ಸೇವೆಗೆ ಸೇರಿದ ನಂತರ ಸುನೀತಾ ಎಸ್,ಪಾಟೀಲ್ ಎಂಬ ಹೆಸರಿನಲ್ಲಿ `ಕಂದಗೂಳದ ಕುಂದನ ಹರಳು' ಎಂಬ ಕೃತಿಯನ್ನು ರಚಿಸಿ ಲೇಖಕಿಯಾಗಿ ಗುರುತಿಸಿಕೊಂಡಿದ್ದಾರೆ. ಇವರು ಬರೆದ ಕತೆ ಕವನ ಲೇಖನಗಳು ನಾಡಿನ ಪ್ರಮುಖ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟಗೊಂಡಿವೆ. ಇವರಿಗೆ ಶಿಕ್ಷಣ ಕ್ಷೇತ್ರದಲ್ಲಿ ಕಲಬುರಗಿ ವಿಭಾಗ ಮಟ್ಟದ `ಸಾಧಕ ಶಿಕ್ಷಕಿ' ಹಾಗೂ `ಉತ್ತಮ ಶಿಕ್ಷಕ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಪಡೆದಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ