ಪುಟಗಳು

ಗುರುವಾರ, ಫೆಬ್ರವರಿ 13, 2025

ಅಜೇಯ್ ಪಿ ಎಸ್

'ಕವಿ ರಾಕ್ಷಸ' ಎಂಬ ಕಾವ್ಯ ನಾಮದಿಂದ ಬರೆಯುತ್ತಿರುವ ಯುವ ಸಾಹಿತಿ ಅಜೇಯ್ ಪಿ ಎಸ್ (ಎ.ಜೆ) ರವರು ಬೀದರ ಜಿಲ್ಲೆ, ಚಿಟಗುಪ್ಪ ತಾಲೂಕಿನ ಮುತ್ತಂಗಿ ಗ್ರಾಮದವರು. ತಂದೆ ಪ್ರಭು ತಾಯಿ ಅನೀತಾ ರವರ ಸುಪತ್ರನಾಗಿ ದಿನಾಂಕ 20-7-1998 ರಲ್ಲಿ ಜನಿಸಿದ್ದಾರೆ. ಇಂಜಿನಿಯರಿಂಗನಲ್ಲಿ ಪದವೀಧರನಾದ ಇವರು ಕತೆ, ಕವನ, ಲೇಖನ ಮತ್ತು ವೈಚಾರಿಕ ಬರಹಗಳನ್ನು ಬರೆಯುತ್ತಿದ್ದಾರೆ. ಇವರ ಬರಹಗಳು ನಾಡಿನ ಹಲವಾರು ಪ್ರಮುಖ ಪತ್ರಿಕೆಗಳಲ್ಲಿ ಹಾಗೂ ವಿವಿಧ ಅಂತರ್ಜಾಲ ತಾಣಗಳಲ್ಲಿ ಪ್ರಕಟವಾಗಿವೆ. ಮತ್ತು 'ಮೊಗ್ಗು' ಎನ್ನುವ ಕವನ ಸಂಕಲನ ಬಿಡುಗಡೆ ಮಾಡಿದ್ದಾರೆ ' ಅಷ್ಟೇಯಲ್ಲದೇ ಕೆಲ ಕತೆ ಕವನ ಲೇಖನ ಹಾಗೂ ಮಿನಿಕಾದಂಬರಿಗಳು ಬರೆದಿದ್ದು ಅವು ಪ್ರಕಟಣೆಯ ಹಂತದಲ್ಲಿವೆ. ಇವರ ಸಾಹಿತ್ಯ ಸಾಧನೆಗೆ ಮೆಚ್ಚಿ ನಾಡಿನ ಹಲವಾರು ಕನ್ನಡ ಪರ ಸಂಘ ಸಂಸ್ಥೆಯವರು ಕೆಲ ಪ್ರಶಸ್ತಿ ಪುರಸ್ಕಾರಗಳು ನೀಡಿ ಗೌರವಿಸಿದ್ದಾರೆ. ಎನ್ನುವುದು ಹೆಮ್ಮೆಯ ವಿಷಯವಾಗಿದೆ. ಸಧ್ಯ ಸಾಫ್ಟವೇರ್ ಇಂಜನಿಯರಾಗಿ ಹೈದರಾಬಾದಿನಲ್ಲಿ ಕೆಲಸ ಮಾಡುತ್ತಿದ್ದಾರೆ ಕಲ್ಯಾಣ ಸಿರಿಗನ್ನಡ ಸಾಹಿತ್ಯ ತಾಣಕ್ಕೆ ಬೇಟಿ ಕೊಡಿ

ಶನಿವಾರ, ಫೆಬ್ರವರಿ 8, 2025

ಸಿದ್ಧಾರ್ಥ ಟಿ ಮಿತ್ರಾ.

ಉದಯೋನ್ಮುಖ ಯುವ ಕವಿ, ಸಾಹಿತಿ ಹಾಗೂ ಲೇಖಕರಾದ ಸಿದ್ಧಾರ್ಥ ಟಿ.ಮಿತ್ರಾ ರವರು ಬೀದರ ಜಿಲ್ಲೆಯ ಹುಮನಾಬಾದ ತಾಲ್ಲೂಕಿನ ದುಬಲಗುಂಡಿ ಗ್ರಾಮದವರು. 3-11-1989 ರಲ್ಲಿ ಜನಿಸಿದ್ದಾರೆ. ಎಂ.ಎಸ್ಸಿ. ಸ್ನಾತಕೋತ್ತರ ಪದವೀಧರರಾದ ಇವರು ಶಿಕ್ಷಕ ವೃತ್ತಿಯಲ್ಲಿ ತೊಡಗಿದ್ದಾರೆ. ಮತ್ತು ಸಾಹಿತ್ಯ ಕ್ಷೇತ್ರದಲ್ಲಿಯೂ ತುಂಬ ಆಸಕ್ತರಾಗಿ ಕವನ ಲೇಖನ ಮೊದಲಾದ ಬರಹಗಳ ಮೂಲಕ ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಇವರು ಬರೆದ ಹಲವಾರು ಲೇಖನಗಳು ಜನ ಮೆಚ್ಚುಗೆ ಗಳಿಸಿವೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ 'ಕಲ್ಯಾಣದಲ್ಲಿ ಕಾಯಕಯೋಗಿ ನೆಲೆಸಿರಲು ಕಲ್ಲಿಗ್ಯಾಕೆ ಪೂಜೆ, ಲೋಕದ ಡೊಂಕು ತಿದ್ದುವ ಭರದಲ್ಲಿ ಕಾವಿಗೆ ಕಳಂಕ ತಂದ ಕಾವಿಧಾರಿಗಳು, ಕೊರತೆಗಳ ನಡುವೆಯೂ ವಿಶ್ವದ ಗಮನ ತನ್ನತ ಸೆಳೆದ ಈ ನೇಲದ ವೀರ ಮಾತೆಯರು, ಸಾಹೇಬ್ ನಾನು ಬರುತ್ತೆನೆ ನೀಮ್ಮ ಜೊತೆ, ಶೌರ್ಯ ಭೂಮಿ ಭೀಮಾಕೊರೆಗಾಂವ , ಬುದ್ದನಷ್ಟೆ ಪರಿಶುದ್ಧ ವ್ಯೆಕ್ತಿ ಅಂಬೇಡ್ಕರ್. ಇತ್ಯಾದಿಗಳಾಗಿವೆ. ಸಾಹಿತ್ಯ ಕೃಷಿಗೆ ಮೆಚ್ಚಿ ಜಿಲ್ಲಾ ಮಟ್ಟದ 'ಕನ್ನಡ ಸೇವಾ ರತ್ನ ಪ್ರಶಸ್ತಿ, ರಾಷ್ಟ್ರ ಮಟ್ಟದ ಸಾಹಿತ್ಯ ಸೌರಭ, ಪ್ರಶಸ್ತಿ ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ

ಅಶ್ವಜೀತ ದಂಡಿನ್.



  ಉದಯೋನ್ಮುಖ ಯುವ ಬರಹಗಾರರಾದ  ಅಶ್ವಜೀತ ದಂಡಿನ   ರವರು ಬೀದರ ತಾಲ್ಲೂಕಿನ ಮಾಳೆಗಾಂವ ಗ್ರಾಮದವರು. ತಂದೆ ಬಕ್ಕಪ್ಪ ತಾಯಿ ಪಾರ್ವತಿಯವರ ಸುಪತ್ರನಾಗಿ ದಿನಾಂಕ 5-12-1996 ರಲ್ಲಿ ಜನಿಸಿದ್ದಾರೆ. ಪಿಯುಸಿ ಮತ್ತು ಐಟಿಐ ವರೆಗೆ ಅಧ್ಯಯನ ಮಾಡಿದ ಇವರು ಕತೆ, ಕವನ, ಲೇಖನ ಮತ್ತು ವೈಚಾರಿಕ ಬರಹಗಳನ್ನು ಬರೆಯುತ್ತಿದ್ದಾರೆ.

 ಇವರ ಬರಹಗಳು ನಾಡಿನ ಹಲವಾರು ಪ್ರಮುಖ ಪತ್ರಿಕೆಗಳಲ್ಲಿ ಹಾಗೂ ವಿವಿಧ ಅಂತರ್ಜಾಲ ತಾಣಗಳಲ್ಲಿ ಅವು ಪ್ರಕಟವಾಗಿವೆ. ಅಷ್ಟೇಯಲ್ಲದೇ ಇವರು ಬರೆದ 'ಚಿಮ್ಮಿದ ಬುಗ್ಗೆ, (ಕವನ ಸಂಕಲನ) ಬುದ್ದ ಭೀಮರ ಭಜನೆಹಾಡುಗಳು, ಧರಿನಾಡ ಸಿರಿ, ನೆಲದ ಅಳಲು '' ಎಂಬ ಕೆಲ  ಕೃತಿಗಳು ಪ್ರಕಟಣೆಯ ಹಂತದಲ್ಲಿವೆ.

ಇವರ ಸಾಹಿತ್ಯ ಸಾಧನೆಗೆ ಮೆಚ್ಚಿ ನಾಡಿನ ಹಲವಾರು ಕನ್ನಡ ಪರ ಸಂಘ ಸಂಸ್ಥೆಯವರು ಕೆಲ ಪ್ರಶಸ್ತಿ ಪುರಸ್ಕಾರಗಳು ನೀಡಿ ಗೌರವಿಸಿದ್ದಾರೆ. ಎನ್ನುವುದು ಹೆಮ್ಮೆಯ ವಿಷಯವಾಗಿದೆ. ಆದರೆ  ಸಾಹಿತಿ ಅಶ್ವಜೀತ ದಂಡಿನ ರವರು ಬಾಲ್ಯದಲ್ಲಿ ಅಪಘಾತಕ್ಕೆ ಈಡಾಗಿ ಕಾಲಿನ ಮೂಳೆ ಮುರಿದಿದಕ್ಕಾಗಿ ಚಿಕಿತ್ಸೆ ಪಡೆದು ಮಾತ್ರೆ ಸೇವಿಸಿದಕ್ಕಾಗಿ ಅದು ಅವರ ಕಿವಿಗಳ ಮೇಲೆ ಅಡ್ಡಪರಿಣಾಮ ಬಿರಿ ಶೇ.೬೯% ಕೇಳುವ ಶಕ್ತಿ ಕಳೆದುಕೊಂಡು ಕೇಳಿಸುವಿಕೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎನ್ನುವುದು ನೋವಿನ ಸಂಗತಿಯಾಗಿದೆ.

ಮಂಗಳವಾರ, ಜನವರಿ 21, 2025

ಸಂಜೀವ ಪಿ.ಸರ‍್ಯವಂಶಿ.

ಉದಯೋನ್ಮುಖ ಕವಿ, ಸಾಹಿತಿಗಳಾಗಿ ಗರ‍್ತಿಸಿಕೊಂಡು ಮರಾಠಿ ಭಾಷೆಯಲ್ಲಿ ಕತೆ,ಕವನ, ಲೇಖನ ಮೊದಲಾದ ತರಹದ ಸಾಹಿತ್ಯ ರಚಿಸಿ ಪುಸ್ತಕ ಪ್ರಕಟಿಸಿದ ಲೇಖಕರೆಂದರೆ ಸಂಜೀವ ಪಿ.ಸರ‍್ಯವಂಶಿ. ಇವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಭಾಟಸಾಂಗವಿ ಗ್ರಾಮದ ಪುಂಡಲೀಕರಾವ ಮತ್ತು ಕೇರಾಬಾಯಿ ದಂಪತಿಗಳಿಗೆ ದಿನಾಂಕ ೧-೬-೧೯೭೬ ರಲ್ಲಿ ಜನಿಸಿದ್ದಾರೆ. ಎಂ.ಎ. (ಮರಾಠಿ) ಸ್ನಾತಕೋತ್ತರ ಪದವಿಧರರಾದ ಇವರು ಭಾಲ್ಕಿಯ ಅಕ್ಕ ಮಹಾದೇವಿ ಮಹಿಳಾ ಪದವಿ ಪರ‍್ವ ಮಹಾವಿದ್ಯಾಲಯದಲ್ಲಿ ಮರಾಠಿ ಭಾಷಾ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಮಾತೃಭಾಷೆ ಮರಾಠಿಯಾಗಿದ್ದರು ಕೂಡ ಕನ್ನಡ, ಹಿಂದಿ, ಇಂಗ್ಲೀಷ್, ಭಾಷಾ ಪ್ರಾವೀಣ್ಯತೆಯನ್ನು ಹೊಂದಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ತುಂಬ ಆಸಕ್ತರಾಗಿ ಕೆಲ ಪ್ರಕಾರದ ಕತೆ ಕವನ ಲೇಖನ ಪ್ರಬಂಧ ಹನಿಗವನ ಮೊದಲಾದವು ಬರೆದಿದ್ದಾರೆ. ಮತ್ತು ೨೦೧೪ ರಲ್ಲಿ 'ಚಕ್ರ.' ಎಂಬ (ಕವನ ಸಂಕಲನ) ಮರಾಠಿ ಭಾಷೆಯಲ್ಲಿ ಬರೆದು ಪುಸ್ತಕ ಪ್ರಕಟಿಸಿದ್ದಾರೆ. ಅಷ್ಟೇಯಲ್ಲದೆ ಇವರ ಕವನ, ಲೇಖನ,ಪ್ರಬಂಧ, ಹನಿಗವನ, ಬರಹಗಳು 'ಅಸ್ಮೀತಾ' ಮತ್ತು 'ಅನುಬಂಧ' ಎಂಬ ಮರಾಠಿ ತ್ರೈಮಾಸಿಕ ಪತ್ರಿಕೆ ಹಾಗೂ ಕೆಲ ಪ್ರಾತಿನಿಧಿಕ ಸಂಕಲನಗಳಲ್ಲಿ ಅವು ಪ್ರಕಟವಾಗಿವೆ. ಇವರಿಗೆ ನಾಡಿನಾದ್ಯಂತ ಹಲವಾರು ಪ್ರಶಸ್ತಿ, ಪುರಸ್ಕಾರಗಳು ಲಭಿಸಿವೆ.

ಡಾ.ರಣಧೀರ ಬೇಲೂರ

ಉದಯೋನ್ಮುಖ ಯುವ ಬರಹಗಾರರಲ್ಲಿ ಒಬ್ಬರಾಗಿ ಕಾವ್ಯ ಲೇಖನ, ವಿಮರ್ಶೆ, ಸಂಶೋಧನಾ ಕೃತಿಗಳನ್ನು ಪ್ರಕಟಿಸಿದ ಯುವ ಲೇಖಕರೆಂದರೆ, ಡಾ.ರಣಧೀರ ಬೇಲೂರ. ಇವರು ಬೀದರ ಜಿಲ್ಲೆ ಹುಲಸೂರು ತಾಲೂಕಿನ ಬೇಲೂರು ಗ್ರಾಮದ ಶ್ರೀ ಬಸ್ಸಪ್ಪ ಭರಮಣೆ ಮತ್ತು ಶೋಭಾವತಿ ದಂಪತಿಗಳಿಗೆ ದಿನಾಂಕ 24-6-1990ರಲ್ಲಿ ಜನಿಸಿದ್ದಾರೆ. ಎಂ.ಎ. ಪಿ.ಎಚ್.ಡಿ.ಪದವಿಧರ ರಾದ ಇವರು 2018ರಿಂದ ಶಿವಮೊಗ್ಗದ ಡಿ.ವಿ .ಎಸ್.ಅನುದಾನಿತ ಪದವಿ ಮಹಾವಿದ್ಯಾಲಯದಲ್ಲಿ ಕನ್ನಡ ಸಹ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾದ ಇವರು ಕೆಲ ಕೃತಿಗಳು ಹೊರ ತಂದಿದ್ದಾರೆ. ಅವುಗಳೆಂದರೆ 2018ರಲ್ಲಿ 'ಹೊಸ ಹೆಜ್ಜೆ' ಎಂಬ ವಿಮರ್ಶಾ ಕೃತಿ, ಮತ್ತು 'ನವೋದಯ ಕವಿ ಕಾವ್ಯ' ಎಂಬ ಸಂಪಾದಿತ ಕೃತಿಯು ಪ್ರಕಟಿಸಿದರೆ, 2019ರಲ್ಲಿ 'ಶಿವ ನೆನೆ' ಎಂಬ ಮತ್ತೊಂದು ಸಂಶೋಧನಾ ಲೇಖನಗಳ ಕೃತಿಯೂ ಪ್ರಕಟಿಸಿದ್ದಾರೆ. ಮತ್ತು 'ಬಸವ ಮುಖಿ ಪ್ರಜ್ಞೆ' ಹಾಗೂ 'ಬಸವಣ್ಣ' ಎಂಬ ಕೃತಿಗಳು ಪ್ರಕಟಣೆಯ ಹಂತದಲ್ಲಿವೆ. ಇವರ ಲೇಖನ ಬರಹಗಳು ನಾಡಿನ ಪ್ರಮುಖ ಪತ್ರಿಕೆಗಳಾದ ಸ೦ವಾದ,ಅರಹು-ಕುರಹು, ಕವಿಮಾರ್ಗ,ಹೊಸತು, ಲಿಂಗಾಯತ ದರ್ಶನ,ಚಿಂತನಾ,ಶಿಕ್ಷಣ ಸೌಧ ಇತ್ಯಾದಿ ಪತ್ರಿಕೆಗಳಲ್ಲಿ 50ಕ್ಕೂ ಹೆಚ್ಚು ಲೇಖನಗಳು ಪ್ರಕಟವಾಗಿವೆ. ಮತ್ತು ರಾಜ್ಯ, ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣಗಳಲ್ಲಿಯೂ ಪಾಲ್ಗೊಂಡು ಹಲವಾರು ಪ್ರಬಂಧಗಳನ್ನು ಮಂಡಿಸಿದ್ದಾರೆ. ಸದ್ಯ ಇವರು ಶಿವಮೊಗ್ಗದಲ್ಲಿ ವಾಸವಾಗಿದ್ದು, ತಮ್ಮ ಪ್ರಾಧ್ಯಾಪಕ ವೃತ್ತಿ ಬದುಕಿನೊಂದಿಗೆ ಸೃಜನಶೀಲ ಸಾಹಿತ್ಯ ರಚನೆಯಲ್ಲಿ ತೊಡಗಿದ್ದಾರೆ.

ಪೂಜ್ಯ. ಶ್ರೀ ಪಂಚಾಕ್ಷರಿ ಉರಿಲಿಂಗಪೆದ್ದಿ ಸ್ವಾಮಿಜಿ.

ಬೀದರ ಜಿಲ್ಲೆಯ ಸಾಹಿತ್ಯ ಕ್ಷೇತ್ರದಲ್ಲಿ ಒಬ್ಬರಾಗಿ ಗುರುತಿಸಿಕೊಂಡು *,ಚಿಂತನ* *ಶರಣ ಸಾಹಿತ್ಯ*, ಸೇರಿದಂತೆ ಮೊದಲಾದ ಬರಹಗಳು ಬರೆದು,ಶರಣರ ವಚನಗಳು ಸಂಗ್ರಹಿಸಿ ಪುಸ್ತಕ ಪ್ರಕಟಿಸಿದ ಲೇಖಕ, ಮಠಾಧೀಶರೆಂದರೆ ಪೂಜ್ಯ. ಶ್ರೀ. ಪಂಚಾಕ್ಷರಿ ಸ್ವಾಮಿಗಳು. ಇವರು ಬೀದರ ಜಿಲ್ಲೆಯ ನೂತನ ಹುಲಸೂರು ತಾಲ್ಲೂಕಿನ ಬೇಲೂರು ಗ್ರಾಮದ ಶಿವಕುಮಾರ ಸ್ವಾಮಿ ಮತ್ತು ಶೇಷಾಬಾಯಿ ದಂಪತಿಗಳಿಗೆ ದಿನಾಂಕ ೯-೯-೧೯೭೩ ರಲ್ಲಿ ಜನಿಸಿದ್ದಾರೆ. ಇವರು ಕಲಿತದ್ದು ಬರಿ ಏಳನೇ ತರಗತಿಯವರೆಗೆ ಮಾತ್ರ. ಚಿಕ್ಕಂದಿನಲ್ಲಿ ಮುಂಬೈ, ಅಹಮದಾಬಾದ ನಗರಗಳಿಗೆ ವಲಸೆ ಹೋಗಿ, ಕೂಲಿ ಕಾರ್ಮಿಕರಾಗಿ ದುಡಿದ ಶ್ರೀಗಳು ಆಕಸ್ಮಿಕ ತಮ್ಮ ತಂದೆಯ ಕಾಲವಾದ ನಂತರ ಮಠದ ಪೀಠಾಧ್ಯಕ್ಷರಾಗಿದ್ದ ಚಿಕ್ಕಪ್ಪ ಬಸವಂತ ಸ್ವಾಮಿಯೂ ಅನಾರೋಗ್ಯದಿಂದ ಇಹಲೋಕ ತ್ಯಜಿಸಿದರು.ಆಗ ಭಕ್ತರ ಆಶಯದಂತೆ ಪಂಚಾಕ್ಷರಿ ಸ್ವಾಮಿಗಳು ಪಟ್ಟಾಧಿಕಾರ ಹೊಂದಿ, ೪೫ ದಿನ ಅನುಷ್ಠಾನ ತಪಗೈದಿದ್ದಾರೆ. ಪ್ರತಿವರ್ಷ ಶ್ರೀ ಶಿವಲಿಂಗೇಶ್ವರ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದಲ್ಲಿ *ಶರಣ ಸಂಸ್ಕೃತಿ ಉತ್ಸವ, ಉರಿಲಿಂಗ ಪೆದ್ದಿ ಉತ್ಸವ*, ಕಾರ್ಯಕ್ರಮಗಳು ಶ್ರೀಗಳು ಮಾಡುತ್ತಾ ಬರುತ್ತಿದ್ದಾರೆ. ಈ ಉತ್ಸವದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ರಾಜ್ಯ ಮಟ್ಟದ ' *ಉರಿಲಿಂಗ ಪೆದ್ದಿ ಪ್ರಶಸ್ತಿ*' ಯು ನೀಡುತ್ತಿರುವುದು ವಿಶೇಷವಾಗಿದೆ. ಮೊದಲಿಗೆ ೨೦೦೭ರಲ್ಲಿ ಯುವ ಕತೆಗಾರ *ಮಚ್ಚೇಂದ್ರ ಪಿ.ಅಣಕಲ್* ಅವರಿಗೆ ಈ ಪ್ರಶಸ್ತಿಯೊಂದಿಗೆ ನಗದು ಗೌರವ ಧನ ನೀಡಿ ಗೌರವಿಸಿದ್ದಾರೆ. ಈ ಪ್ರಶಸ್ತಿಯು ಪತ್ರಕರ್ತ *ಮಾಣಿಕ ಭುರೆ* ಅವರ ಪ್ರಾಯೋಜಕತ್ವದಲ್ಲಿ ಸ್ಥಾಪಿಸಲಾಗಿದ್ದು, ಇಲ್ಲಿಯವರೆಗೆ ಸುಮಾರು ೩೫ ಜನ ವಿವಿಧ ಗಣ್ಯರಿಗೆ ಈ ಪ್ರಶಸ್ತಿ ಪ್ರಧಾನ ಮಾಡಲಾಗಿದೆ. ಮತ್ತು ೨೦೧೧ರಿಂದ ಸಾಹಿತಿ *ಡಾ.ಗವಿಸಿದ್ದಪ್ಪಾ ಎಚ್.ಪಾಟೀಲ್* ಅವರ ಸಂಚಾಲನೆಯಲ್ಲಿ ೧೨. ವಿವಿಧ ಜಿಲ್ಲಾ, ವಿಭಾಗ, ರಾಜ್ಯ ಮಟ್ಟದ *ಪ್ರಥಮ ಸಾಹಿತ್ಯ ಸಮ್ಮೇಳನಗಳು*' ನಡೆಸಿಕೊಂಡು ಬಂದಿರುವುದು ಮಠದ ಹೆಮ್ಮೆಯ ವಿಷಯವಾಗಿದೆ. ಹೀಗೆ ಸಾಹಿತ್ಯ ಚಟುವಟಿಕೆಗಳನ್ನು ನಡೆಸುತ್ತಾ ಬರುತ್ತಿರುವ ಶ್ರೀಗಳು ಸ್ವತಃ ಸಾಹಿತ್ಯ ರಚನೆಯಲ್ಲಿ ಆಸಕ್ತರಾಗಿ ಕೆಲವು ಚಿಂತನ,ಶರಣರ ಕುರಿತಾದ ಸಾಹಿತ್ಯವು ರಚಿಸಿದ್ದಾರೆ . ಮತ್ತು *ಕಾಳವ್ವೆ, ಉರಿಲಿಂಗದೇವ ಮತ್ತು ಶರಣ ಉರಿಲಿಂಗಪೆದ್ದಿ ವಚನಗಳ ಸಂಗ್ರಹ*' ಎಂಬ ಪುಸ್ತಕವು ಸಂಪಾದಿಸಿ ಪ್ರಕಟಿಸಿದ್ದಾರೆ. ಅಷ್ಟೇಯಲ್ಲದೆ *ಶರಣ ಉರಿಲಿಂಗ ಪೆದ್ದಿ ಮಠ ಟ್ರಸ್ಟ್* ವತಿಯಿಂದ ಪ್ರಕಾಶನ ಸಂಸ್ಥೆಯನ್ನು ಹುಟ್ಟು ಹಾಕಿ, ಅದರಡಿಯಲ್ಲಿ ವಿವಿಧ ಲೇಖಕರ ೨೦ ಪುಸ್ತಕಗಳು ಪ್ರಕಟಿಸಿದ್ದಾರೆ. ಇವರ ಕುರಿತು ೨೦೧೦ ರಲ್ಲಿ ಪತ್ರಕರ್ತ,ಸಾಹಿತಿ *ಮಾಣಿಕ ಆರ್. ಭುರೆ*' ಯವರು *ದಲಿತ ಪೀಠಾಧಿಪತಿ*' ಎಂಬ ಪುಸ್ತಕವು ಬರೆದಿದ್ದು, ಆ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ *ರೇವಯ್ಯ ದತ್ತಿ ಪುಸ್ತಕ ಪ್ರಶಸ್ತಿ* ಯು ಲಭಿಸಿದೆ. ಮತ್ತು ' *ಉರಿಲಿಂಗ ಪೆದ್ದಿ ವಚನಗಳ ಒಳನೊಟ* ' ಎಂಬ ಪುಸ್ತಕವೊಂದು ಇತ್ತಿಚೆಗೆ ಪ್ರಕಟಗೊಂಡಿದೆ. ಅಷ್ಟೇಯಲ್ಲದೆ *ಡಾ.ಸಾಹುಕಾರ ಎಸ್.ಕಾಂಬಳೆ* ಯವರು ಈ ಉರಿಲಿಂಗ ಪೆದ್ದಿ ಮಠಗಳ ಕುರಿತು *ಲಿಂಗಾಯತ ಅಸ್ಪೃಶ್ಯರು ಒಂದು ಅಧ್ಯಯನ* ' ಎಂಬ ವಿಷಯದ ಮೇಲೆ ಪಿ.ಎಚ್.ಡಿ. ಅಧ್ಯಯನ ಮಾಡಿ, ಡಾಕ್ಟರೇಟ್ ಪದವಿಯು ಪಡೆದಿದ್ದಾರೆ. ಸದ್ಯ ಇವರು ಸರಳ ಹಾಗೂ ಸಾದಾ- ಸೀದಾ ಜೀವನದೊಂದಿಗೆ ಬಸವಕಲ್ಯಾಣದ ತ್ರೀಪೂರಾಂತ ಶಾಖಾ ಮಠದಲ್ಲಿ ನೆಲೆಸಿ, ಚಿಂತನ ಹಾಗೂ ಶರಣ ಸಾಹಿತ್ಯ ರಚನೆಯಲ್ಲಿ ತೊಡಗಿದ್ದಾರೆ.

ಪೂಜ್ಯ. ಶ್ರೀ. ಸುರೇಶ ಸ್ವಾಮಿ ಹಿರೇಮಠ.

ಬೀದರ ಜಿಲ್ಲೆಯ ಸಾಹಿತ್ಯ ಕ್ಷೇತ್ರದಲ್ಲಿ ಹಿರಿಯ ಬರಹಗಾರರಲ್ಲಿ ಒಬ್ಬರಾಗಿ ಅಧ್ಯಾತ್ಮಿಕ ದೃಷ್ಟಿಕೋನದಿಂದ ಹಲವಾರು ಪುಸ್ತಕಗಳು ಬರೆದು ಎಲೆ ಮರೆಯ ಕಾಯಿಯಂತೆ ಉಳಿದ ಶ್ರೀಗಳು, ಲೇಖಕರೆಂದರೆ ಪರಮ ಪೂಜ್ಯ ಲಿಂಗೈಕ್ಯ *ಸುರೇಶ ಸ್ವಾಮಿ ಹಿರೇಮಠ ಗೋರ್ಟಾ*. ಇವರು ಬೀದರ ಜಿಲ್ಲೆಯ ಬಸವಕಲ್ಯಾಣ ತಾಲುಕಿನ ಐತಿಹಾಸಿಕ ಗ್ರಾಮ ಗೋರ್ಟಾ(ಬಿ)ಯ ಹಿರೇಮಠದ ಶ್ರೀ ವೇದಮೂರ್ತಿ ರೇವಣಸಿದ್ಧ ಸ್ವಾಮಿ ಮತ್ತು ಮಾತೋಶ್ರೀ ಗುರುದೇವಿ ಯವರ ಪುಣ್ಯ ಗರ್ಭದಲ್ಲಿ ಜನಿಸಿದರು. ಪೂಜ್ಯರು ಬಾಲ್ಯದಿಂದಲೆ ವೇದ , ಉಪನಿಷತ್ತು ಪುರಾಣ, ಪಂಚಾAಗ ಅಧ್ಯಾತ್ಮಿಕದ , ಹಲವಾರು ದರ್ಶನಗಳ ಅಧ್ಯಯನವನ್ನು ಮಾಡಿದವರು. ತ್ರೀಕಾಲ ಲಿಂಗಪೂಜಾ ನಿಷ್ಠರಾದ ಇವರು ಆಧ್ಯಾತ್ಮಿಕ ಕ್ಷೇತ್ರದಲ್ಲಿ ಮಹಾನ ಸಾಧನೆಯನ್ನು ಮಾಡಿ, ದೈಹಿಕ ರೂಪದಲ್ಲಿದ್ದ ೧೦೩ ವರ್ಷಗಳ ಕಾಲ ಸಮಾಜಕ್ಕೆ ಧರ್ಮ ಮಾರ್ಗದಲ್ಲಿ ನಡೆಯಲು ಪ್ರೇರಣೆಯನ್ನು ನೀಡಿದ್ದಾರೆ. ಪೂಜ್ಯರು ತಮ್ಮ ಸಂಪೂರ್ಣ ಜೀವನವನ್ನು ಧರ್ಮ ಮತ್ತು ಸಮಾಜದ ಸೇವೆಗಾಗಿ ಸಮರ್ಪಿಸಿದ್ದವರು. ಮಹಾರಾಷ್ಟ್ರದ ಬೀಡ ಜಿಲ್ಲೆಯ ಎಡಸಿ ಪರ್ವತದಲ್ಲಿ *ಮಾನವ ಧರ್ಮ ಸಂಸ್ಥೆ* ಸ್ಥಾಪಿಸಿ ಸಾವಿರಾರು ಜನರಿಗೆ ವೇದ , ಉಪನಿಷತ್ , ಸಂಗೀತ , ಸಾಹಿತ್ಯದ ಪ್ರಶಿಕ್ಷಣವನ್ನು ನೀಡಿದ್ದಾರೆ . ಹಾಗು ೧೯೪೮ ರ ರಜಾಕಾರರ ಹಾವಳಿಯಲ್ಲಿ ನಿರಾಶ್ರಿತರಾಗಿ ಸ್ವಗ್ರಾಮ ತ್ಯಜಿಸಿದವರಿಗೆ ಆಶ್ರಯವನ್ನು ಕಲ್ಪಿಸಿದ್ದರು , ಎಡಸಿಯಲ್ಲು ಸಹ ರಜಾಕಾರರ ಹಾವಳಿ ಹೆಚ್ಚಾದಾಗ ತಮ್ಮ ಆಶ್ರಮವನ್ನು ಸೊಲ್ಲಾಪುರದ ಸಮೀಪದಲ್ಲಿರುವ ಟಿಕ್ಕೆಕರವಾಡಿಗೆ ಸ್ಥಳಾಂತರಿಸಿ ಅಲ್ಲಿಯೂ ಸಹ ವರ್ಷಾನುಗಟ್ಟಲೆ ನಿರಾಶ್ರಿತರಿಗೆ ಊಟ ಮತ್ತು ವಸತಿ ವ್ಯವಸ್ಥೆಯನ್ನು ಕಲ್ಪಿಸಿದರು. ಪೂಜ್ಯರು ಜೀವನ ಪರ್ಯಂತರವಾಗಿ ಪರಮ ಪೂಜ್ಯ ಲಿಂಗೈಕ್ಯ ಸದ್ಗುರು ರಾಚೋಟಿಶಿವಾಚಾರ್ಯರ ಜೊತೆ ಗುಡಿ ಜಪಯಜ್ಞ ಕಾರ್ಯಕ್ರಮಗಳ ಮೂಲಕ ಭಕ್ತರಲ್ಲಿ ಆಧ್ಯಾತ್ಮಿಕ ಉನ್ನತಿಗೆ ಶ್ರಮಿಸಿದ್ದಾರೆ. ಅವುಗಳಲ್ಲಿ ಪ್ರಮುಖ ಕಾರ್ಯಕ್ರಮಗಳೆಂದರೆ , ಬಸವಕಲ್ಯಾಣದ ತ್ರೀಪುರಾಂತ , ಮಹಾರಾಷ್ಟ್ರದ ಚಾಕೂರ , ಗೋರ್ಟಾ , ಮೇಹಕರ , ಡೋಣಗಾಪುರ , ಬೀದರನ ಪಾಪನಾಶ ಮುಂತಾದ ಕಡೆಯಲ್ಲಿ ಹಮ್ಮಿಕೊಂಡಿದ್ದ ಜನ-ಜಾಗೃತಿ ಧರ್ಮ ಸಭೆಗಳು. ೧೯೮೨ ರಲ್ಲಿ ವಿಶ್ವ ಶಾಂತಿ ಟ್ರಸ್ಟ್ ಸ್ಥಾಪಿಸಿ ಅದರ ಮುಖಾಂತರ ಧಾರ್ಮಿಕ , ಶೈಕ್ಷಣಿಕ , ಸಾಮಾಜಿಕ , ಸಂಸ್ಕೃತಿಕ , ಸಾಹಿತ್ಯಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದು ದೇಶದಾದ್ಯಂತದ ಲಕ್ಷಾಂತರ ಜನರ ಪ್ರೇಮ ಮತ್ತು ಭಕ್ತಿಗೆ ಪಾತ್ರರಾಗಿದ್ದಾರೆ. ಶ್ರೀ ಸುರೇಶ ಸ್ವಾಮಿಗಳು ಬಹುಭಾಷಾ ಪಂಡಿತರಾಗಿದ್ದು ಕನ್ನಡ , ಮರಾಠಿ , ಸಂಸ್ಕೃತ ಮತ್ತು ಹಿಂದಿ ಭಾಷೆಗಳಲ್ಲಿಯೂ ಸಾಹಿತ್ಯ ರಚಿಸಿದ್ದಾರೆ. ಇವರ ಪ್ರಮುಖ ಕೃತಿಗಳೆಂದರೆ *೧.ಮಾನವ ಧರ್ಮ ಶಾಸ್ತ್ರ*. *೨.ಅಸ್ಪರ್ಶರು ಯಾರು ? ೩) ಧರ್ಮ ಮತ್ತು ರಾಷ್ಟ್ರ ೪) ಜಪಯಜ್ಞ ಸಂವಿಧಾನ ೫) ಸ್ವರಾಜ್ಯ ವಿಜ್ಞಾನ ೬) ಶ್ರೀ ರುದ್ರ ಪೂಜಾ , ೭ ಜಪ ಪ್ರಯೋಗ* ಮುಂತಾದವು ಗಳಾಗಿವೆ. ಪರಮ ಪೂಜ್ಯ ಸುರೇಶ ಸ್ವಾಮಿಗಳು ದಿನಾಂಕ ೩೧-೦೫-೨೦೦೮ ರಂದು ತಮ್ಮ ೧೦೩ ನೆ ವಯಸ್ಸಿನಲ್ಲಿ ಲಿಂಗೈಕ್ಯರಾದರು. ಅನ್ನೊದು ನೋವಿನ ಸಂಗತಿಯಾಗಿದೆ. ಅವರ ಕನ್ನಡ , ಮರಾಠಿ , ಹಿಂದಿ ಭಾಷೆಗಳಲ್ಲಿ ರಚಿಸಿದ ಸಾಹಿತ್ಯ ಇಂದಿನ ಆಧುನಿಕ ಯುಗದಲ್ಲಿಯು ಅತ್ಯಂತ ಅವಶ್ಯಕವಾಗಿದೆ.

ಸೋಮವಾರ, ಜನವರಿ 20, 2025

ರಮೇಶ ಸ್ವಾಮಿ ಕನಕಟ್ಟಾ

ಸಾಹಿತಿ ರಮೇಶ ಸ್ವಾಮಿ ಕನಕಟ್ಟಾ, ರವರು ಬೀದರ ಜಿಲ್ಲೆ ಹುಮನಾಬಾದ ತಾಲ್ಲೂಕಿನ ಕನಕಟ್ಟಾ ಗ್ರಾಮದ ಕಾರ್ತಿಕ ಸ್ವಾಮಿ ಮತ್ತು ಕಮಲಾಬಾಯಿ ದಂಪತಿಗಳಿಗೆ ದಿನಾಂಕ 1-6-1963ರಲ್ಲಿ ಜನಿಸಿದ್ದಾರೆ. ಡಿಪ್ಲೊಮಾ ಇನ್ ಎಲೆಕ್ನಿಕಲ್ ಇಂಜಿನಿಯರಿಂಗ್, ಮತ್ತು ಎಂ.ಎ.ಪತ್ರಿಕೋದ್ಯಮ ಪದವಿಧರರಾಗಿದ್ದು, 1983ರಲ್ಲಿ ಜೇವರ್ಗಿಯ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಲ್ಲಿ ಸೇವೆಗೆ ಸೇರಿದ ಇವರು ಸದ್ಯ ಬೀದರಯ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಉಪನಿರ್ದೇಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ತುಂಬ ಆಸಕ್ತರಾಗಿ ಕೆಲ ಕೃತಿಗಳು ಪ್ರಕಟಿಸಿದ್ದಾರೆ. ಅವುಗಳೆಂದರೆ, 2011 ರಲ್ಲಿ 'ವಚನಕ್ಕೊಂದು ಕತೆ', 'ಶ್ರಾವಣ ಸಂಪದ', 2014ರಲ್ಲಿ 'ಸಂಸಾರದಲ್ಲಿ ಸದ್ಧತಿ, 'ಅನುಭವ ಮಂಟಪದಲ್ಲಿ ಸಿದ್ದರಾಮ' 2015ರಲ್ಲಿ 'ಗುರು ಕರುಣೆ, `ಅಕ್ಕನ ದರ್ಶನ' 2016ರಲ್ಲಿ 'ಜೀವನ ದರ್ಶನ', 2017ರಲ್ಲಿ 'ಬಸವದರ್ಶನ', 'ವಚನಾಮೃತಧಾರೆ' ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರ ಬರಹಗಳು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಹಾಗೂ ಇವರ 'ಬಸವ ದರ್ಶನ' ಕೃತಿಗೆ 2017ರಲ್ಲಿ ಬಸವಕಲ್ಯಾಣದ ಅನುಭವ ಮಂಟಪದ ಉತ್ತಮ ಪುಸ್ತಕ ಪ್ರಶಸ್ತಿಯು ಲಭಿಸಿದೆ.

ಬಿ.ಬಿ.ಪೂಜಾರಿ

`ಕನ್ನಡದ ಪೂಜಾರಿ' ಎಂದು ಕನ್ನಡ ವಿದ್ಯಾರ್ಥಿಗಳಿಗೆ ಅಚ್ಚು ಮೆಚ್ಚಿನ ಪ್ರಾಧ್ಯಾಪಕರಾಗಿ, ಕವಿ,ಸಾಹಿತಿ, ಲೇಖಕರಾಗಿ ಖ್ಯಾತರಾದ ಹಿರಿಯ ಸಾಹಿತಿಯೆಂದರೆ ಡಾ. ಬಿ.ಬಿ.ಪೂಜಾರಿಯವರು. ಇವರು ಬೀದರ ಜಿಲ್ಲೆ ಹುಮನಾಬಾದಿನ ಶ್ರೀ ಬಂಡೆಪ್ಪ ಮತ್ತು ವೀರಮ್ಮ ದಂಪತಿಗಳಿಗೆ ದಿನಾಂಕ 1-8-1959ರಲ್ಲಿ ಜನಿಸಿದ್ದಾರೆ. ಎಂ.ಎ.ಪಿ.ಎಚ್.ಡಿ ಪದವಿಧರರಾದ ಇವರು 1986ರಿಂದ ಮಹಾರಾಷ್ಟ್ರ ಸೊಲ್ಲಾಪುರದ ಸಂಗಮೇಶ್ವರ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ 2019ರಲ್ಲಿ ನಿವೃತ್ತರಾಗಿದ್ದು, ಮತ್ತು 2020ರಿಂದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಶಾಸ್ತ್ರೀಯ ಕನ್ನಡ ಕೇಂದ್ರದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮತ್ತು ಸಾಹಿತ್ಯದಲ್ಲಿಯು ತುಂಬ ಆಸಕ್ತರಾಗಿ ಕತೆ, ಕವನ, ಹನಿಗವನ, ಲೇಖನ, ಪ್ರಬಂಧ ಮೊದಲಾದ ಬರಹಗಳು ಬರೆದ ಇವರು 'ಮೂರು ಬಣ್ಣ ನೂರು ಕವನ, ನಮ್ಮ ದನಿಗೆ ನಿಮ್ಮ ದನಿ, ಜನಮನ ಗೆದ್ದವರು, ಚಿಟ್ಟೆ ಬಂತು ಚಿಟ್ಟೆ, ಮುಕುಂದೂರು ಸ್ವಾಮಿ, ಕರ್ಮಯೋಗಿ, ಗಂಗಮ್ಮನ ಬೋರ್.' ಎಂಬಿತ್ಯಾದಿ ಕೃತಿಗಳು ಪ್ರಕಟಿಸಿದ್ದಾರೆ. ಇವರ ಬರಹಗಳು ಕನ್ನಡದ ಪ್ರಮುಖ ವಿವಿಧ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಮತ್ತು ಇವರು 10ವರ್ಷ ಮಹಾರಾಷ್ಟ್ರ ರಾಜ್ಯದ ಕನ್ನಡ ಪಠ್ಯ ಪುಸ್ತಕ ಮಂಡಳಿಯ ಸದಸ್ಯರಾಗಿ, ಶಿವಾಜಿ ಮತ್ತು ಸೊಲ್ಲಾಪುರ ವಿಶ್ವ ವಿದ್ಯಾಲಯದ ಅಭ್ಯಾಸ ಮಂಡಳಿಯ ಸದಸ್ಯರಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಮತ್ತು ಏಳು ವಿದ್ಯಾರ್ಥಿಗಳು ಇವರ ಮಾರ್ಗದರ್ಶನದಲ್ಲಿ ಪಿ.ಎಚ್‌.ಡಿ.ಪದವಿ ಪಡೆದಿದ್ದಾರೆ. ಇವರಿಗೆ ದರ್ಶನ ರತ್ನ, ಗಡಿ ಕನ್ನಡ ವೀರ, ಮಿನಿ ಕವಿತೆಗಳ ಸರದಾರ. ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಸದ್ಯ ಇವರು ಕಲಬುರಗಿಯಲ್ಲಿ ವಾಸವಾಗಿದ್ದು ಸಾಹಿತ್ಯ ಕೃಷಿಯನ್ನು ಮುಂದುವರೆಸಿದ್ದಾರೆ.

ಸಂಗಮ್ಮ ಚ.ಬಮ್ಮಣಿ

ಸಾಹಿತಿ ಸಂಗಮ್ಮ ಚ. ಬಮ್ಮಣಿ ಯವರು ಬೀದರ ಜಿಲ್ಲೆ ಹುಮನಾಬಾದ ತಾಲೂಕಿನ ಹಳ್ಳಿಖೇಡ (ಬಿ) ಗ್ರಾಮದ ವಿಠಲರಾವ ಜೂಜಾ ಮತ್ತು ತೋಟಮ್ಮಾ ದಂಪತಿಗಳಿಗೆ ದಿನಾಂಕ 1-6- 1973 ರಲ್ಲಿ ಜನಿಸಿದ್ದಾರೆ. ಎಂ.ಎ. ಬಿ.ಎಡ್, ಎಂ.ಎ. ಸಮಾಜ ಶಾಸ್ತ್ರ, ಎಂ.ಎ. ರಾಜ್ಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದ ವಿಧರರಾದ ಇವರು 1997 ರಲ್ಲಿ ಹುಮನಾಬಾದ ತಾಲೂಕಿನ ಜಲಸಂಗಿ ಗ್ರಾಮದ ಪ್ರೌಢ ಶಾಲಾ ಶಿಕ್ಷಕರಾಗಿ ಸೇವೆಗೆ ಸೇರಿ ಹಲವಾರು ವರ್ಷ ಸೇವೆ ಸಲ್ಲಿಸಿದ ಇವರು ಸದ್ಯ ಹಳ್ಳಿಖೇಡ (ಕೆ) ಗ್ರಾಮದ ಪ್ರೌಢ ಶಾಲೆಯ ಉಪಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ವಿದ್ಯಾರ್ಥಿಯಾಗಿದಾಗಲೆ ಕತೆ ಕವನ ಲೇಖನ ಪ್ರಬಂಧ ಚುಟುಕುಗಳನ್ನು ಬರೆಯುವ ಗೀಳು ಬೆಳೆಸಿಕೊಂಡು ಕೆಲವು ಕೃತಿಗಳನ್ನು ರಚಿಸಿದ್ದಾರೆ. ಅವುಗಳೆಂದರೆ, 2015 ರಲ್ಲಿ 'ಅರಳುವ ಪ್ರತಿಭೆ' ಎಂಬ ವ್ಯಕ್ತಿತ್ವ ವಿಕಸನದ ಕೃತಿಯೊಂದು ಹೊರತಂದು 2017 ರಲ್ಲಿ 'ಮಹಾತಾಯಿ' ಎಂಬ ಕವನ ಸಂಕಲನವು ಪ್ರಕಟಿಸಿದ್ದಾರೆ. ಅಷ್ಟೇಯಲ್ಲದೆ ಇವರ ಬರಹಗಳು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಇವರಿಗೆ 2017ರಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, 2018 ರಲ್ಲಿ ಪರಿಸರ ವಾಹಿನಿಯಿಂದ ಉತ್ತಮ ಶಿಕ್ಷಕ ಪ್ರಶಸ್ತಿ, ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ.

ಮಹಾನಂದಾ ಬಿರಾದಾರ

ಯುವ ಕವಯತ್ರಿಯಾದ ಮಹಾನಂದಾ ಬಿರಾದಾರ ರವರು ಬೀದರ ಜಿಲ್ಲೆ ಹುಮನಾಬಾದ ತಾಲೂಕಿನ ಚಿನಕೇರಾ ಗ್ರಾಮದ ಜಗನ್ನಾಥ ಮತ್ತು ಗೌರಮ್ಮ ದಂಪತಿಗಳ ಪುತ್ರಿಯಾಗಿದ್ದು ಇವರು ಅಫಜಲಪೂರದ ಪ್ರಕಾಶ ಜೈನರವರ ಧರ್ಮಪತ್ನಿಯಾಗಿದ್ದಾರೆ. ಬಿ.ಎ., ಡಿ.ಎಡ್ ಪದವಿಧರರಾದ ಇವರು 'ಹೊಂಗಿರಣ' ಎಂಬ ಕವನ ಸಂಕಲನ ಪ್ರಕಟಿಸಿದ್ದಾರೆ. ಸದ್ಯ ಇವರು ಅಫಜಲಪೂರದಲ್ಲಿ ವಾಸವಾಗಿದ್ದಾರೆ.

ಸಂಗಪ್ಪಾ ತೌಡಿ

ಯುವ ಸಾಹಿತಿ ಸಂಗಪ್ಪಾ ತೌಡಿಯವರು ಬೀದರ ಜಿಲ್ಲೆ ಹುಮನಾಬಾದ ತಾಲ್ಲೂಕಿನ ಮೀನಕೇರಾ ಗ್ರಾಮದ ಚಂದ್ರಪ್ಪ ತೌಡಿ ಮತ್ತು ಭಾರತಿ ತೌಡಿ ದಂಪತಿಗಳಿಗೆ ದಿನಾಂಕ ೧-೬-೧೯೯೨ರಲ್ಲಿ ಜನಿಸಿದ್ದಾರೆ. ಎಂ,ಎ, ಸ್ನಾತಕೊತ್ತರ ಪದವಿ ಪಡೆದ ಇವರು ಪಿ.ಎಚ್,ಡಿ ಅಧ್ಯಯನ ಮಾಡುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ತೊಡಗಿಸಿಕೊಂಡ ಇವರು `ಭಾವ ಚಿಗುರು' ಮತ್ತು `ಅವ್ವನಿಗೆ' ಎಂಬ ಕವನ ಸಂಕಲನಗಳು ಪ್ರಕಟಿಸಿದ್ದಾರೆ. ಮತ್ತು ಇವರ ಲೇಖನ ಸಂಶೋಧನಾ ಬರಹಗಳು ಕೆಲ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಮತ್ತು ಇವರ `ಮನೆಗೊಂದು ಗೊಂದಲದ ಹಾಡು' ಎಂಬ ಕತೆ ಕ್ರೈಸ್ತ ಟು ಬಿ ಯುನಿವರ್ಸಿಟಿಯಿಂದ ಅ.ನ.ಕೃ. ಪ್ರಶಸ್ತಿ ಪಡೆದಿದೆ. ಮತ್ತು ದ.ರಾ ಬೇಂದ್ರೆ ಶೃತಿ ಅಂತರರಾಜ್ಯ ಮಟ್ಟದ ಕಾಲೇಜು ಕಾವ್ಯ ಸ್ವರ್ಧೆಯಲ್ಲಿ ಎರಡು ಬಾರಿ ಬಹುಮಾನ ಪಡೆದಿದ್ದಾರೆ. ಹಾಗೂ ಕೇಂದ್ರೀಯ ವಿಶ್ವವಿದ್ಯಾಲಯ ಕಲಬುರಗಿಯಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದಾರೆ. ಮತ್ತು ರಾಜ್ಯ, ರಾಷ್ಟ್ರೀಯ ಅಂತರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಪ್ರಬಂಧಗಳನ್ನು ಮಂಡಿಸಿದ್ದು, ಮತ್ತು ರಾಜ್ಯ ಮಟ್ಟದ ಕಥೆ, ಕಾವ್ಯ, ಗಜಲ್, ಕಾದಂಬರಿ ಕಮ್ಮಟಗಳಲ್ಲಿಯೂ ಪಾಲ್ಗೊಂಡಿದ್ದಾರೆ.

ಪ್ರಿಯಾ ಲಂಜವಾಡಕರ್

ಉದಯೋನ್ಮುಖ ಕಾದಂಬರಿಗಾರ್ತಿ ಪ್ರಿಯಾ ಲಂಜವಾಡಕರ್. ಇವರು ಬೀದರ ಜಿಲ್ಲೆ ಹುಮನಾಬಾದಿನ ಮಾರುತಿರಾವ ಮತ್ತು ಸುಮಂಗಲಾ ದಂಪತಿಗಳಿಗೆ ದಿನಾಂಕ ೧-೪-೧೯೮೫ರಲ್ಲಿ ಜನಿಸಿದ್ದಾರೆ. ಆಂಗ್ಲ ಭಾಷೆಯಲ್ಲಿ ಎಂ.ಎ. ಬಿ,ಇಡಿ ಸ್ನಾತಕೋತ್ತರ ಪದವಿ ಪಡೆದ ಇವರು ಹುಮನಾಬಾದ ತಾಲೂಕಿನ ಬೇಮಳಖೇಡ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾಗಿ ಕಾದಂಬರಿ ಓದುವ ಅಭ್ಯಾಸ ಬೆಳೆಸಿಕೊಂಡಿದ್ದ ಇವರು ಮುಂದೆ ಸ್ವತಃ ಕಾದಂಬರಿ ಬರೆದು ೨೦೧೫ರಲ್ಲಿ `ತಲ್ಲಣಿಸದಿರು...’ ಎಂಬ ಕಾದಂಬರಿ ಪ್ರಕಟಿಸಿದ್ದಾರೆ. ಇವರ ಕವನ, ಲೇಖನ, ಬರಹಗಳು ಬೀದರದ `ಸಾಹಿತ್ಯ ಸಿಂಚನ’ ಎಂಬ ತ್ರೈಮಾಸಿಕ ಸೇರಿದಂತೆ ಕನ್ನಡದ ಕೆಲ ಸ್ಥಳಿಯ ಪತ್ರಿಕೆಗಳಲ್ಲಿ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಇವರಿಗೆ ಹುಮನಾಬಾದಿನ ಸಾಕ್ಷಿ ಪ್ರತಿಷ್ಠಾನದ ವತಿಯಿಂದ ಸಿದ್ಧಾರ್ಥ ಪ್ರಶಸ್ತಿಯು ನೀಡಿ ಗೌರವಿಸಿದ್ದಾರೆ.

ಭಾನುವಾರ, ಜನವರಿ 19, 2025

ಜಗನ್ನಾಥ ಕಮಲಾಪೂರೆ

ಸಾಹಿತಿ ಜಗನ್ನಾಥ ಕಮಲಾಪೂರೆ ಯವರು ಬೀದರ ತಾಲೂಕಿನ ಯರನಳ್ಳಿ ಗ್ರಾಮದ ಶರಣಪ್ಪ ಮತ್ತು ಸರಸ್ವತಿ ದಂಪತಿ ಗಳಿಗೆ ದಿನಾಂಕ 1-6-1970 ರಲ್ಲಿ ಜನಿಸಿದ್ದಾರೆ. ಎಂ.ಎ.ಎಂ.ಎಡ್. ಎಂ.ಫಿಲ್, ಪಿ.ಜಿ.ಬಿ. ಎಚ್.ಇ.ಪದವೀಧರರಾದ ಇವರು ಬೀದರದ ಕರ್ನಾಟಕ ಬಿ.ಇಡಿ.ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ವೃತ್ತಿ ಬದುಕಿನೊಂದಿಗೆ ಸಾಹಿತ್ಯದಲ್ಲಿ ಆಸಕ್ತರಾಗಿ ಕೆಲ ಪುಸ್ತಕಗಳು ಹೊರ ತಂದಿದ್ದಾರೆ. 'ಬುಲಾಯಿ ಹಾಡುಗಳು ಒಂದು ಅಧ್ಯಯನ' ಎಂಬುದು ಇವರ ಎಂ.ಫಿಲ್. ಪ್ರಬಂಧವಾಗಿದೆ. ಮತ್ತು 2017 ರಲ್ಲಿ 'ಅಕ್ಷರ ಕಾರಂಜಿ', 2018 ರಲ್ಲಿ 'ದಾಂಪತ್ಯ ಗೀತೆ,' (ಸಂಪಾದನೆ) 2019 ರಲ್ಲಿ 'ಡಾ.ರಾಜೇಂದ್ರ ಯರನಾಳೆ' (ಬದುಕು ಬರಹ) ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರ ಕವನ, ಲೇಖನ, ಪ್ರಬಂಧ, ಸೇರಿದಂತೆ ಮೊದಲಾದ ಬರಹಗಳು ನಾಡಿನ ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ.

ವಿನೋದಕುಮಾರ ಹೊನ್ನಾ

ಯುವ ಸಾಹಿತಿ ವಿನೋದಕುಮಾರ ಹೊನ್ನಾ ರವರು ಬೀದರ ತಾಲೂಕಿನ ಬಗದಲ್ ಗ್ರಾಮದ ಪ್ರಭುರಾವ ಹೊನ್ನಾ ಮತ್ತು ಚಿನ್ನಮ್ಮ ದಂಪತಿಗಳಿಗೆ ದಿನಾಂಕ 18-8-1981ರಲ್ಲಿ ಜನಿಸಿದ್ದಾರೆ. ಬಿ.ಎ.ಪದವಿಧರರಾದ ಇವರು ಕಲಬುರಗಿ ಖಾಸಗಿ ಕಂಪನಿಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದು 2021ರಲ್ಲಿ 'ಕಂಡದ್ದು ಕೈ ಬರಹದಲ್ಲಿ' ಎಂಬ ಕವನ ಸಂಕಲನ ಪ್ರಕಟಿಸಿದ್ದಾರೆ. ಇವರ ಕವನ ಲೇಖನ ಬರಹಗಳು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ.

ಡಾ.ವಿಜಯಲಕ್ಷ್ಮೀ ಗಡ್ಡೆ

ಸಾಹಿತಿ ಡಾ.ವಿಜಯಲಕ್ಷ್ಮೀ ಗಡ್ಡೆ ಯವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಮರೂರು ಗ್ರಾಮದ ದೇಶಮುಖಪ್ಪಾ ಪಾಟೀಲ್ ಮತ್ತು ಸುಶೀಲಾ ಪಾಟೀಲ್ ದಂಪತಿಗಳಿಗೆ ದಿನಾಂಕ ೧೩-೩-೧೯೬೪ ರಲ್ಲಿ ಜನಿಸಿದ್ದಾರೆ. ಎಂ.ಎಸ್ಸಿ. ಬಿ.ಇಡಿ ಪದವಿಧರರಾದ ಇವರು ಸಾಹಿತಿ ಹಾಗೂ ಪತ್ರಕರ್ತರಾದ ಬಸವಕಲ್ಯಾಣದ ಗುರುನಾಥ ಗಡ್ಡೆಯವರ ಧರ್ಮ ಪತ್ನಿಯಾಗಿದ್ದು, ಭಾಲ್ಕಿಯ ಶ್ರೀ ಚನ್ನಬಸವೇಶ್ವರ ಪದವಿ ಮಹಾವಿದ್ಯಾಲಯ ಗಣಿತ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ತುಂಬಾ ಆಸಕ್ತರಾಗಿ, `ಉರಿಲಿಂಗ ಪೆದ್ದಿ ವಚನಗಳಿಗೆ ಭಾವಾರ್ಥ, ಚನ್ನಬಸವ ಪಟ್ಟದೇವರ ಜೀವನ ಚರೀತ್ರೆ,’ ಎಂಬ ಕೃತಿಗಳು ರಚಿಸಿದ್ದಾರೆ. ಮತ್ತು ಹಲವಾರು ಕವನ ಲೇಖನ ಪ್ರಬಂಧಗಳನ್ನು ಬರೆದಿದ್ದು, ಅವು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಇವರು ಹಲವಾರು ನಾಡಿನ ವಿವಿಧ ಸಾಹಿತ್ಯ ಸಮ್ಮೇಳನ ಹಾಗೂ ವಿಚಾರ ಗೋಷ್ಠಿಗಳಲ್ಲಿ ಪಾಲ್ಗೊಂಡು ಉಪನ್ಯಾಸಗಳು, ೩೦೦ಕ್ಕೂ ಅಧಿಕ ಭಾಷಣಗಳು ಮಾಡಿರುತ್ತಾರೆ. ಭಾಲ್ಕಿ ಮತ್ತು ಬೀದರ ಹಿರೇಮಠಗಳಲ್ಲಿ ಶ್ರಾವಣ ಮಾಸದ ಪ್ರಯುಕ್ತ ಪ್ರವಚನವು ನೀಡಿದ್ದಾರೆ. ಇವರು ಬಸವಕಲ್ಯಾಣದ ಬಸವೇಶ್ವರ ದೇವಸ್ಥಾನ ಪಂಚ ಕಮೀಟಿ ನಿರ್ದೇಶಕರಾಗಿ, ಹಲವಾರು ಸಂಘ ಸಂಸ್ಥೆಗಳ ಸದಸ್ಯರಾಗಿ ಸೇವೆ ಸಲ್ಲಿಸಿ ಸದ್ಯ ಬೀದರ ಜಿಲ್ಲಾ ಜನವಾದಿ ಮಹಿಳಾ ಸಂಘಟನೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರಿಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.

ಶ್ರೀನಿವಾಸ ಕುಲಕಣಿ೯

ಕವಿ ಸಾಹಿತಿಯಾದ ಶ್ರೀನಿವಾಸ ಕುಲಕಣಿ೯ಯವರು ಬೀದರ ಕೈಲಾಸನಗರದ ನಾರಾಯನರಾವ ಮತ್ತು ಅಂಬಾಬಾಯಿ ದಂಪತಿಗಳಿಗೆ ದಿನಾಂಕ ೯-೪-೧೯೬೧ರಲ್ಲಿ ಜನಿಸಿದ್ದಾರೆ.ಬಿ.ಎಸ್ಸಿ.ಪದವಿಧರರಾದ ಇವರು ಭಾರತೀಯ ಜೀವ ವಿಮಾ ನಿಗಮದ ಉದ್ಯೋಗಿಯಾಗಿ ಸೇವೆ ಸಲ್ಲಿಸಿದ್ದಾರೆ. ಇವರು ೧೯೮೭ರಲ್ಲಿ ಸಂಚಯನ ಮತ್ತು ೧೯೯೩ರಲ್ಲಿ ಸಂತೋಷ ಎಂಬ ಕವನ ಸಂಕಲನಗಳು ಪ್ರಕಟಿಸಿದ್ದಾರೆ.ಇವರಿಗೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.

ಡಾ.ಜಗದೇವಿ ತಿಬಶೆಟ್ಟಿ.

ಸಾಹಿತಿ ಡಾ.ಜಗದೇವಿ ತಿಬಶೆಟ್ಟಿ ಯವರು ಬೀದರ ಜಿಲ್ಲೆ ಹುಮನಾಬಾದ ತಾಲೂಕಿನ ಹಳ್ಳಿಖೇಡ (ಬಿ) ಪಟ್ಟಣದ ಬಸವಣಪ್ಪ ಮತ್ತು ಗೋದಾವರಿ ದಂಪತಿಗಳಿಗೆ ದಿನಾಂಕ ೧೭-೯-೧೯೭೨ರಲ್ಲಿ ಜನಿಸಿದ್ದಾರೆ. ಎಂ.ಎ.ಬಿ.ಎಡ್. ಪಿ.ಎಚ್.ಡಿ. ನೆಟ್. ಪದವಿಧರರಾದ ಇವರು ಹಾಲಹಳ್ಳಿ ಜ್ನಾನ ಕಾರಂಜಿ ಪಿ.ಜಿ.ಸೆಂಟರ್ ನಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿದ್ಯಾರ್ಥಿಯಾಗಿರುವಾಗಲೇ ಸಾಹಿತ್ಯದಲ್ಲಿ ಆಸಕ್ತರಾಗಿ ಕೆಲ ಕೃತಿಗಳು ರಚಿಸಿದ್ದಾರೆ. ಅವುಗಳೆಂದರೆ `ಅನರ್ಘ್ಯ ರತ್ನ' (ಲೇಖನ ಸಂಕಲನ) `ಸೋಮನಾಥ ಯಾಳವಾರ' ( ಚರಿತ್ರೆ) ಎಂಬ ಕೃತಿಗಳು ಪ್ರಕಟಿಸಿದ್ದಾರೆ. `ಶರಣರ ದಾಂಪತ್ಯ ದರ್ಶನ' ಎಂಬುದು ಇವರ ಪಿ.ಎಚ್.ಡಿ.ಪ್ರಬಂಧವಾಗಿದೆ. ಇವರ ಬರಹಗಳು ಬಸವಪಥ, ಲೋಕಸಿರಿ, ಶರಣರ ದರ್ಶನ, ವಚನ ಚಂದ್ರಿಕೆ, ಬಸವ ಪರಿಶೋಧ, ಶರಣ ಸೌರಭ, ಮೊದಲಾದ ಮಾಸಪತ್ರಿಕೆ ಹಾಗೂ ಸ್ಮರಣ ಸಂಚಿಕೆಗಳಲ್ಲಿ ಪ್ರಕಟವಾಗಿವೆ. ಮತ್ತು ಇವರು ರಾಜ್ಯ, ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ ಹಾಗೂ ಕಸಾಪ ಸಮ್ಮೇಳನಗಳಲ್ಲಿ ಪಾಲ್ಗೊಂಡು ಹಲವಾರು ಪ್ರಬಂಧಗಳನ್ನು ಮಂಡಿಸಿದ್ದಾರೆ. ಇವರಿಗೆ ೨೦೧೯ರಲ್ಲಿ ಚೇತನ ಪ್ರಕಾಶನ ಬೆಂಗಳೂರಿನಿAದ `ಸರೋಜಿನಿ ಚವಲಾರ' ರಾಜ್ಯ ಪ್ರಶಸ್ತಿ, ಹಾಗೂ ಸ್ನೇಹ ಯುವ ಸಾಂಸ್ಕೃತಿಕ ಸಂಘ ಬೆಂಗಳೂರಿನಿAದ ಕರ್ನಾಟಕ ಶಿಕ್ಷಣ ರತ್ನ ಪ್ರಶಸ್ತಿ, ಮತ್ತು ೨೦೧೯ರಲ್ಲಿ ಹಾಸ್ಯ ತರಂಗ ಕಲಾ ಸಂಸ್ಥೆ ಬೆಂಗಳೂರಿನಿAದ ಕಾವ್ಯ ಶಾರದೆ ರಾಜ್ಯ ಪ್ರಶಸ್ತಿ, ೨೦೧೮ರಲ್ಲಿ ಬೀದರ ದೇಶಪಾಂಡೆ ಪ್ರತಿಷ್ಠಾನದ ವತಿಯಿಂದ `ಸಮಾಜ ಕಲಾ ರತ್ನ' ಪ್ರಶಸ್ತಿ ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ.

ಡಾ.ಸಿ.ಎಸ್.ಪಾಟೀಲ್.

ಸಾಹಿತಿ ಡಾ.ಸಿ.ಎಸ್.ಪಾಟೀಲ್ ರವರ ಪೂರ್ಣನಾಮ 'ಚಂದ್ರಕಾAತ ಸಂಗಶೆಟ್ಟಿ ಪಾಟೀಲ್ ' ಎಂದಾಗಿದೆ. ಇವರು ಬೀದರ ತಾಲ್ಲೂಕಿನ ಕಂಗನಕೋಟೆ ಗ್ರಾಮದ ಸಂಗಶೆಟ್ಟಿ ಪಾಟೀಲ್ ಮತ್ತು ನಾಗಮ್ಮ ದಂಪತಿಗಳಿಗೆ ದಿನಾಂಕ ೨೯-೨-೧೯೬೦ರಲ್ಲಿ ಜನಿಸಿದ್ದಾರೆ. ಎಂ.ಎಸ್ಸಿ. ಪಿ.ಎಚ್.ಡಿ.ಪದವಿ ಪಡೆದು ೧೯೮೪ರಲ್ಲಿ ಸುರಪುರದ ಪ್ರಭು ಕಾಲೇಜಿನಲ್ಲಿ ಸಸ್ಯಶಾಸ್ತ್ರ ಉಪನ್ಯಾಸಕರಾಗಿ ಸೇವೆಗೆ ಸೇರಿ ನಂತರ ಬೆಂಗಳೂರಿನ ವೀರೇಂದ್ರ ಪಾಟೀಲ್ ಪದವಿ ಮಹಾವಿದ್ಯಾಲಯದಲ್ಲಿ ೧೦ವರ್ಷ ಬೀದರದ ಬಿ.ವಿ.ಬಿ. ಕಾಲೇಜಿನಲ್ಲಿ ೫ವರ್ಷ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ೧೦ ವರ್ಷ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ, ಪ್ರಾಂಶುಪಾಲರಾಗಿ, ೩ ವರ್ಷ ಗುಲ್ಬರ್ಗ ವಿಶ್ವವಿದ್ಯಾಲಯದ ಮೌಲ್ಯ ಮಾಪನ ಕುಲಸಚಿವರಾಗಿ ಸೇವೆ ಸಲ್ಲಿಸಿ ನಂತರ ಗುಲ್ಬರ್ಗ ವಿಶ್ವವಿದ್ಯಾಲಯದ ಎಂ.ಎಸ್.ಐ ಕಾಲೇಜಿನ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ೨೦೧೯ರಲ್ಲಿ ನಿವೃತ್ತರಾಗಿದ್ದಾರೆ. ಮತ್ತು ಸಾಹಿತ್ಯದಲ್ಲಿಯು ತುಂಬ ಆಸಕ್ತರಾಗಿ ೧೯೯೫ರಲ್ಲಿ `ಹೊಂಗಿರಣ' (ಕವನ ಸಂಕಲನ) ೨೦೦೨ರಲ್ಲಿ `ತಳಿ ತಂತ್ರಜ್ಞಾನ' (ವೈಜ್ಞಾನಿಕ ಬರಹಗಳ ಸಂಕಲನ) `ವಚನಗಳಲ್ಲಿ ವಿಜ್ಞಾನ' ಮತ್ತು 'ಅಕ್ಕನ ವಚನಗಳಲ್ಲಿ ಪರಿಸರ' ಎಂಬ ಕನ್ನಡ ಕೃತಿಗಳು ಪ್ರಕಟಿಸಿದರೆ ೨೦೦೮ರಲ್ಲಿ `ಬಯ ಟಿಕ್ನಾಲಜಿ, ಮತ್ತು ಮಲೆಕ್ವಲೋಡ್ ಬಯೊಲಜಿ’ ಎಂಬ ಕೃತಿಗಳು ಹೊರತಂದು ೨೦೧೦ರಲ್ಲಿ `ಸೆಲ್ ಬಯೋಲಜಿ’ ೨೦೧೨ರಲ್ಲಿ `ಬಯೋ ಇನ್ ಫಾರ್ಮೆಟಿಕ್' ಮತ್ತು ೨೦೧೪ರಲ್ಲಿ `ಮೈಟೊಕಾಂಡ್ರಿಯಲ್ ಇಂಜಿನಿಯರಿAಗ್' ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರ ಬರಹಗಳು ಪ್ರಜಾವಾಣಿ, ವಿಜಯ ಕರ್ನಾಟಕ, ತರಂಗ, ಮೊದಲಾದ ಪತ್ರಿಕೆಗಳಲ್ಲಿ ಹಾಗೂ ಆಕಾಶವಾಣಿಯಲ್ಲಿಯೂ ಪ್ರಸಾರವಾಗಿವೆ. ಅಷ್ಟೇಯಲ್ಲದೆ ಇವರು ೬ ವರ್ಷ ಬೀದರ ಜಿಲ್ಲೆಯ ವಿಜ್ಞಾನ ಶಿಕ್ಷಣ ಸಮಿತಿಯ ಅಧ್ಯಕ್ಷರಾಗಿ, ವಿಜ್ಞಾನ ಪರಿಷತ್ತಿನ ಸದಸ್ಯರಾಗಿ ಸೇವೆ ಸಲ್ಲಿಸಿ ಐದಾರು ದೇಶ ವಿದೇಶಗಳಿಗೆ ಸುತ್ತಾಡಿ ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದ ವಿಜ್ಞಾನ ಸಮಾವೇಶದಲ್ಲಿ ಭಾಗಿಯಾಗಿದ್ದರಿಂದ. ೨೦೧೧ರಲ್ಲಿ ದೆಹಲಿಯಿಂದ ಅಂತರಾಷ್ಟ್ರೀಯ ಭಾರತ ಸೇವಾ ಪ್ರಶಸ್ತಿ, ೨೦೧೩ರಲ್ಲಿ ಮಲ್ಲೆಷಿಯಾದಿಂದ 'ಜೈವಿಕ ತಂತ್ರಜ್ಞಾನದ ಫೆಲೋಷಿಪ್ ಪ್ರಶಸ್ತಿ, ಪಡೆದು ಬೀದರ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಸದ್ಯ ಇವರು ಕಲಬುರಗಿಯಲ್ಲಿ ವಾಸವಾಗಿದ್ದು ತಮ್ಮ ವಿಶ್ರಾಂತಿ ಬದುಕಿನೊಂದಿಗೆ ಸಾಹಿತ್ಯ ಕೃಷಿಯು ಮುಂದುವರೆಸಿದ್ದಾರೆ.

ವಿದ್ಯಾವತಿ. ಎಸ್. ಹಿರೇಮಠ

ಸಾಹಿತಿ ವಿದ್ಯಾವತಿ. ಎಸ್. ಹಿರೇಮಠ ರವರು ಬೀದರ ಜಿಲ್ಲೆ ಲಾಡಗೇರಿ ಗ್ರಾಮದ ಪೂಜ್ಯ. ಶ್ರೀ. ವೇ.ಶಾಂತಲಿAಗಯ್ಯಾ ಸ್ವಾಮಿ ಮತ್ತು ಸುಭದ್ರಾದೇವಿ ದಂಪತಿಗಳಿಗೆ ದಿನಾಂಕ ೪-೯-೧೯೭೭ರಲ್ಲಿ ಜನಿಸಿದ್ದಾರೆ. ಎಂ.ಎ.ಎA. ಎಂ. ಫೀಲ್. ಎಂ.ಎಡ್.ಪದವಿಧರರಾದ ಇವರು ರಾಯಚೂರ ಜಿಲ್ಲೆಯಲ್ಲಿ ಸರ್ಕಾರಿ ಪ.ಪೂ.ಕಾಲೇಜಿನ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ತಮ್ಮ ತಂದೆಯ ಸಾಹಿತ್ಯದ ಪ್ರಭಾವದಿಂದಾಗಿ ಸಾಹಿತ್ಯದಲ್ಲಿ ತೊಡಗಿಸಿಕೊಂಡು `ಮನೆಮದ್ದು' ಎಂಬ ಪುಸ್ತಕ ಪ್ರಕಟಿಸಿದ್ದಾರೆ. ಇವರಿಗೆ ಐದು ವರ್ಷವಿರುವಾಗ ಜ್ವರದ ಚುಚ್ಚು ಮದ್ದು ಕೊಡಿಸಿದ್ದರಿಂದ ಅವರ ಎಡಗೈ ನಿಷ್ಕ್ರಿಯ ಗೊಂಡಿದೆ. ಆದರೂ ಛಲ ಬಿಡದ ಇವರು ಆತ್ಮ ಸ್ಥೈರ್ಯದಿಂದ ಮುಂದೆ ಪ್ಯಾರಾ ಒಲಂಪಿಕ್ ನಲ್ಲಿ ಚಿನ್ನದ ಪದಕ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಮೈಸೂರು, ಬೆಂಗಳೂರು, ಧಾರವಾಡ ರಾಜ್ಯ ಮಟ್ಟದ, ೧೭ನೇ ೧೮ನೇ ರಾಷ್ಟ್ರೀಯ ಕ್ರೀಡಾ ಕೂಟದಲ್ಲಿ ಮತ್ತು ೨೦೧೭ರಲ್ಲಿ, ೨೦೧೮ರಲ್ಲಿ ನೇಪಾಳದಲ್ಲಿ ಅಂತರರಾಷ್ಟ್ರೀಯ ಪ್ಯಾರಾ ಸ್ಪೋರ್ಟ್ಸ್ ನಲ್ಲಿ ಭಾಗವಹಿಸಿ ಚಿನ್ನ, ಬೆಳ್ಳಿ ಪದಕ ಪಡೆದು ರಾಷ್ಟ್ರ, ರಾಜ್ಯ, ಜಿಲ್ಲೆಗೆ ಕೀರ್ತಿ ತಂದಿದ್ದಾರೆ.೨೦೧೯ರಲ್ಲಿ ಶ್ರೀಲಂಕಾದಲ್ಲಿ ಭಾಗವಹಿಸಿ ಚಿನ್ನದ ಪದಕ ಪಡೆದಿದ್ದಾರೆ. ಮತ್ತು ತಮ್ಮ ತಂದೆಯವರು ಬರೆದ ೨೩ ಕೃತಿಗಳ ಸಂಪಾದಕರಾಗಿ ಪುಸ್ತಕ ಪ್ರಕಟಿಸಿದ್ದಾರೆ. ಮತ್ತು `ಶ್ರೀ ಶಾಂತ ವಚನಗಳು’ ಎಂಬ ೧ ಸಾವಿರ ಆಧುನಿಕ ವಚನಗಳು `ಶಿವ ಶಿವಾ’ ಎಂಬ ಅಂಕಿತ ನಾಮದಲ್ಲಿ ಬರೆದ ಇವರು ರಾಜ್ಯ, ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರ್ಣಗಳಲ್ಲಿ ಭಾಗವಹಿಸಿ ಹಲವಾರು ಪ್ರಬಂಧಗಳನ್ನು ಮಂಡಿಸಿದ್ದಾರೆ. `ಡಾನಬಾಸ್ಕೋ’ ಹೊರತರುವ `ಬಾಸ್ಕೋ - ಬಾಂಧವ್ಯ' ಕ್ಕೆ ೫ವರ್ಷದಿಂದ ಅಂಕಣಕಾರರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಮತ್ತು ಗುಲ್ಬರ್ಗಾದ ಕ್ರೈಸ್ತ ಧರ್ಮ ಕ್ಷೇತ್ರದವರು ಮುದ್ರಿಸುವ ಸ್ಪಂದನ ಪತ್ರಿಕೆ ಸೇರಿದಂತೆ ಹಲವಾರು ಕಡೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ಇವರು ಬೀದರದ ಶಾಂತಿ ಧಾಮ ಟ್ರಸ್ಟ್ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇವರಿಗೆ ೨೦೧೯ರಲ್ಲಿ ಬೀದರ ಜಿಲ್ಲಾ ಮಟ್ಟದ ರಾಜೋತ್ಸವ ಪ್ರಶಸ್ತಿ, ೨೦೨೦ರಲ್ಲಿ ಕರ್ನಾಟಕ ಸರ್ಕಾರ ನೀಡುವ ಕಿತ್ತೂರು ಚನ್ನಮ್ಮ ಪ್ರಶಸ್ತಿ, ೨೫ ಸಾವಿರ ನಗದು ಗೌರವಧನ ಪುರಸ್ಕಾರ, ೨೦೧೮ರಲ್ಲಿ ನವಚೇತನ ಚಾರಿಟಬಲ್ ಟ್ರಸ್ಟ ರಾಮನಗರದಿಂದ ಸಾಹಿತ್ಯಶ್ರೀ ಪ್ರಶಸ್ತಿ, ೧೦ ಸಾವಿರ ನಗದು ಗೌರವ ಧನವು ನೀಡಿ ಗೌರವಿಸಿದ್ದಾರೆ. ಮತ್ತು ೨೦೧೮ರಲ್ಲಿ ಬೀದರದ ದೇಶಪಾಂಡೆ ಪ್ರತಿಷ್ಠನದ ವತಿಯಿಂದ ಕಾವ್ಯ ಕುಸುಮಾಂಜಲಿ ರತ್ನ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ.