ಗುರುವಾರ, ಫೆಬ್ರವರಿ 13, 2025
ಅಜೇಯ್ ಪಿ ಎಸ್
'ಕವಿ ರಾಕ್ಷಸ' ಎಂಬ ಕಾವ್ಯ ನಾಮದಿಂದ ಬರೆಯುತ್ತಿರುವ ಯುವ ಸಾಹಿತಿ ಅಜೇಯ್ ಪಿ ಎಸ್ (ಎ.ಜೆ) ರವರು ಬೀದರ ಜಿಲ್ಲೆ, ಚಿಟಗುಪ್ಪ ತಾಲೂಕಿನ ಮುತ್ತಂಗಿ ಗ್ರಾಮದವರು.
ತಂದೆ ಪ್ರಭು ತಾಯಿ ಅನೀತಾ ರವರ ಸುಪತ್ರನಾಗಿ ದಿನಾಂಕ 20-7-1998 ರಲ್ಲಿ ಜನಿಸಿದ್ದಾರೆ.
ಇಂಜಿನಿಯರಿಂಗನಲ್ಲಿ ಪದವೀಧರನಾದ ಇವರು ಕತೆ, ಕವನ, ಲೇಖನ ಮತ್ತು ವೈಚಾರಿಕ ಬರಹಗಳನ್ನು ಬರೆಯುತ್ತಿದ್ದಾರೆ. ಇವರ ಬರಹಗಳು ನಾಡಿನ ಹಲವಾರು ಪ್ರಮುಖ ಪತ್ರಿಕೆಗಳಲ್ಲಿ ಹಾಗೂ ವಿವಿಧ ಅಂತರ್ಜಾಲ ತಾಣಗಳಲ್ಲಿ ಪ್ರಕಟವಾಗಿವೆ. ಮತ್ತು 'ಮೊಗ್ಗು' ಎನ್ನುವ ಕವನ ಸಂಕಲನ ಬಿಡುಗಡೆ ಮಾಡಿದ್ದಾರೆ ' ಅಷ್ಟೇಯಲ್ಲದೇ ಕೆಲ ಕತೆ ಕವನ ಲೇಖನ ಹಾಗೂ ಮಿನಿಕಾದಂಬರಿಗಳು ಬರೆದಿದ್ದು ಅವು ಪ್ರಕಟಣೆಯ ಹಂತದಲ್ಲಿವೆ. ಇವರ ಸಾಹಿತ್ಯ ಸಾಧನೆಗೆ ಮೆಚ್ಚಿ ನಾಡಿನ ಹಲವಾರು ಕನ್ನಡ ಪರ ಸಂಘ ಸಂಸ್ಥೆಯವರು ಕೆಲ ಪ್ರಶಸ್ತಿ ಪುರಸ್ಕಾರಗಳು ನೀಡಿ ಗೌರವಿಸಿದ್ದಾರೆ. ಎನ್ನುವುದು ಹೆಮ್ಮೆಯ ವಿಷಯವಾಗಿದೆ. ಸಧ್ಯ ಸಾಫ್ಟವೇರ್ ಇಂಜನಿಯರಾಗಿ ಹೈದರಾಬಾದಿನಲ್ಲಿ ಕೆಲಸ ಮಾಡುತ್ತಿದ್ದಾರೆ
ಕಲ್ಯಾಣ ಸಿರಿಗನ್ನಡ ಸಾಹಿತ್ಯ ತಾಣಕ್ಕೆ ಬೇಟಿ ಕೊಡಿ
ಶನಿವಾರ, ಫೆಬ್ರವರಿ 8, 2025
ಸಿದ್ಧಾರ್ಥ ಟಿ ಮಿತ್ರಾ.
ಉದಯೋನ್ಮುಖ ಯುವ ಕವಿ, ಸಾಹಿತಿ ಹಾಗೂ ಲೇಖಕರಾದ ಸಿದ್ಧಾರ್ಥ ಟಿ.ಮಿತ್ರಾ ರವರು ಬೀದರ ಜಿಲ್ಲೆಯ ಹುಮನಾಬಾದ ತಾಲ್ಲೂಕಿನ ದುಬಲಗುಂಡಿ ಗ್ರಾಮದವರು. 3-11-1989 ರಲ್ಲಿ ಜನಿಸಿದ್ದಾರೆ. ಎಂ.ಎಸ್ಸಿ. ಸ್ನಾತಕೋತ್ತರ ಪದವೀಧರರಾದ ಇವರು ಶಿಕ್ಷಕ ವೃತ್ತಿಯಲ್ಲಿ ತೊಡಗಿದ್ದಾರೆ. ಮತ್ತು ಸಾಹಿತ್ಯ ಕ್ಷೇತ್ರದಲ್ಲಿಯೂ ತುಂಬ ಆಸಕ್ತರಾಗಿ ಕವನ ಲೇಖನ ಮೊದಲಾದ ಬರಹಗಳ ಮೂಲಕ ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಇವರು ಬರೆದ ಹಲವಾರು ಲೇಖನಗಳು ಜನ ಮೆಚ್ಚುಗೆ ಗಳಿಸಿವೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ
'ಕಲ್ಯಾಣದಲ್ಲಿ ಕಾಯಕಯೋಗಿ ನೆಲೆಸಿರಲು ಕಲ್ಲಿಗ್ಯಾಕೆ ಪೂಜೆ, ಲೋಕದ ಡೊಂಕು ತಿದ್ದುವ ಭರದಲ್ಲಿ ಕಾವಿಗೆ ಕಳಂಕ ತಂದ ಕಾವಿಧಾರಿಗಳು, ಕೊರತೆಗಳ ನಡುವೆಯೂ ವಿಶ್ವದ ಗಮನ ತನ್ನತ ಸೆಳೆದ ಈ ನೇಲದ ವೀರ ಮಾತೆಯರು, ಸಾಹೇಬ್ ನಾನು ಬರುತ್ತೆನೆ ನೀಮ್ಮ ಜೊತೆ, ಶೌರ್ಯ ಭೂಮಿ ಭೀಮಾಕೊರೆಗಾಂವ ,
ಬುದ್ದನಷ್ಟೆ ಪರಿಶುದ್ಧ ವ್ಯೆಕ್ತಿ ಅಂಬೇಡ್ಕರ್. ಇತ್ಯಾದಿಗಳಾಗಿವೆ.
ಸಾಹಿತ್ಯ ಕೃಷಿಗೆ ಮೆಚ್ಚಿ
ಜಿಲ್ಲಾ ಮಟ್ಟದ 'ಕನ್ನಡ ಸೇವಾ ರತ್ನ ಪ್ರಶಸ್ತಿ, ರಾಷ್ಟ್ರ ಮಟ್ಟದ ಸಾಹಿತ್ಯ ಸೌರಭ, ಪ್ರಶಸ್ತಿ ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ
ಅಶ್ವಜೀತ ದಂಡಿನ್.
ಉದಯೋನ್ಮುಖ ಯುವ ಬರಹಗಾರರಾದ ಅಶ್ವಜೀತ ದಂಡಿನ ರವರು ಬೀದರ ತಾಲ್ಲೂಕಿನ ಮಾಳೆಗಾಂವ ಗ್ರಾಮದವರು. ತಂದೆ ಬಕ್ಕಪ್ಪ ತಾಯಿ ಪಾರ್ವತಿಯವರ ಸುಪತ್ರನಾಗಿ ದಿನಾಂಕ 5-12-1996 ರಲ್ಲಿ ಜನಿಸಿದ್ದಾರೆ. ಪಿಯುಸಿ ಮತ್ತು ಐಟಿಐ ವರೆಗೆ ಅಧ್ಯಯನ ಮಾಡಿದ ಇವರು ಕತೆ, ಕವನ, ಲೇಖನ ಮತ್ತು ವೈಚಾರಿಕ ಬರಹಗಳನ್ನು ಬರೆಯುತ್ತಿದ್ದಾರೆ.
ಇವರ ಬರಹಗಳು ನಾಡಿನ ಹಲವಾರು ಪ್ರಮುಖ ಪತ್ರಿಕೆಗಳಲ್ಲಿ ಹಾಗೂ ವಿವಿಧ ಅಂತರ್ಜಾಲ ತಾಣಗಳಲ್ಲಿ ಅವು ಪ್ರಕಟವಾಗಿವೆ. ಅಷ್ಟೇಯಲ್ಲದೇ ಇವರು ಬರೆದ 'ಚಿಮ್ಮಿದ ಬುಗ್ಗೆ, (ಕವನ ಸಂಕಲನ) ಬುದ್ದ ಭೀಮರ ಭಜನೆಹಾಡುಗಳು, ಧರಿನಾಡ ಸಿರಿ, ನೆಲದ ಅಳಲು '' ಎಂಬ ಕೆಲ ಕೃತಿಗಳು ಪ್ರಕಟಣೆಯ ಹಂತದಲ್ಲಿವೆ.
ಇವರ ಸಾಹಿತ್ಯ ಸಾಧನೆಗೆ ಮೆಚ್ಚಿ ನಾಡಿನ ಹಲವಾರು ಕನ್ನಡ ಪರ ಸಂಘ ಸಂಸ್ಥೆಯವರು ಕೆಲ ಪ್ರಶಸ್ತಿ ಪುರಸ್ಕಾರಗಳು ನೀಡಿ ಗೌರವಿಸಿದ್ದಾರೆ. ಎನ್ನುವುದು ಹೆಮ್ಮೆಯ ವಿಷಯವಾಗಿದೆ. ಆದರೆ ಸಾಹಿತಿ ಅಶ್ವಜೀತ ದಂಡಿನ ರವರು ಬಾಲ್ಯದಲ್ಲಿ ಅಪಘಾತಕ್ಕೆ ಈಡಾಗಿ ಕಾಲಿನ ಮೂಳೆ ಮುರಿದಿದಕ್ಕಾಗಿ ಚಿಕಿತ್ಸೆ ಪಡೆದು ಮಾತ್ರೆ ಸೇವಿಸಿದಕ್ಕಾಗಿ ಅದು ಅವರ ಕಿವಿಗಳ ಮೇಲೆ ಅಡ್ಡಪರಿಣಾಮ ಬಿರಿ ಶೇ.೬೯% ಕೇಳುವ ಶಕ್ತಿ ಕಳೆದುಕೊಂಡು ಕೇಳಿಸುವಿಕೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎನ್ನುವುದು ನೋವಿನ ಸಂಗತಿಯಾಗಿದೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)

